ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏನಾದರೂ ಒಂದು ವಿಶೇಷ ಮಾಡಿ ಸುದ್ದಿಯಲ್ಲಿ ಇರುತ್ತಾರೆ.
ಈಗ ಡಿಸಿ ರೋಹಿಣಿ ಸಿಂಧೂರಿ ಮೇಡಂ ಅವರು ತಮ್ಮ ಕಾರ್ ಗೆ ತಾವೇ ಪಂಕ್ಚರ್ ಹಾಕುವ ವಿಡಿಯೋ ವೈರಲ್ ಆಗಿದೆ. ಡಿ.ಸಿಯೊಬ್ಬರು ಪಂಕ್ಚರ್ ಹಾಕುತ್ತಿರುವುದನ್ನು ನೋಡಿ ಜನರು ಬೆರಗಾಗಿದ್ದಾರೆ. ರೋಹಿಣಿ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಟುಂಬದ ಜೊತೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಕಾರಿನ ಟೈರ್ ಕಳಚಿ ಪಂಕ್ಚರ್ ಹಾಕುತ್ತಿದ್ದರು.. ಇದನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದಾರೆ.
ಈ ವೇಳೆ ಆ ವ್ಯಕ್ತಿಯೊಬ್ಬರು, ಮೇಡಂ ನೀವು ರೋಹಿಣಿ ಸಿಂಧೂರಿ ಅಲ್ವಾ? ನೀವು ಪಂಕ್ಚರ್ ಹಾಕ್ತಿದ್ದೀರಾ? ಅಂತ ಪ್ರಶ್ನಿಸುವ ವಿಡಿಯೋದಲ್ಲಿ ಕೇಳಬಹುದು.
ಆ ವ್ಯಕ್ತಿಯ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ಸಿಂಧೂರಿ ನಕ್ಕು ಸುಮ್ಮನಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು