ಮಾಜಿ ಸಚಿವ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಟ್ರಾಫಿಕ್ ಪೊಲೀಸರ ಜೊತೆ ಗಲಾಟೆ ಮಾಡಿ ರಂಪಾಟ ಮಾಡಿದ್ದಾರೆ. ಈ ಘಟನೆ ಸಿಲಿಕಾನ್ ಸಿಟಿಯ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿದೆ.
ಇದನ್ನು ಓದಿ –PSI ನೇಮಕಾತಿಯಲ್ಲಿ ಅಕ್ರಮ – ಮೊದಲ ರ್ಯಾಂಕ್ ಅಭ್ಯರ್ಥಿ ಬಂಧನ
ರ್ಯಾಷ್ ಆಗಿ ಕಾರ್ ಡ್ರೈವ್ , ಸಿಗ್ನಲ್ ಜಂಪ್ ಮಾಡಿದ್ದುಹಾಗೂ ಸೀಟ್ ಬೆಲ್ಟ್ ವಿಚಾರವಾಗಿ ಪೊಲೀಸರ ಜೊತೆ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿಕೊಂಡಿದ್ದಾಳೆ.
‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗೆ ಗುರುವಾರ ಕಾರಿನಲ್ಲಿ ಹೊರಟಿದ್ದ ಲಿಂಬಾವಳಿ ಪುತ್ರಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.
ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ₹ 1,000 ದಂಡ ಹಾಗೂ ಹಳೇ ಪ್ರಕರಣಗಳಿಗೆ ₹ 9,000 ದಂಡ ಕಟ್ಟಿಸಿಕೊಳ್ಳಲಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದು ಎಂಎಲ್ಎ ಗಾಡಿ..? ನಾನು ಅರವಿಂದ್ ಲಿಂಬಾವಳಿ ಪುತ್ರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ.
ಪೋಲಿಸರ ಜೊತೆ ಒರಟಾಗಿ ವರ್ತಿಸಿದ ಲಿಂಬಾವಳಿ ಪುತ್ರಿಗೆ 10 ಸಾವಿರ ರು ದಂಡ ಹಾಕಿ ನಂತರ ಕಾರು ಬಿಟ್ಟು ಕಳಿಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ