January 30, 2026

Newsnap Kannada

The World at your finger tips!

thagalavadi

ಕ್ಷುಲ್ಲಕ ಕಾರಣಕ್ಕಾಗಿ ಮಗಳು ಆತ್ಮಹತ್ಯೆ: ಸುದ್ದಿ ತಿಳಿದ ತಂದೆಯೂ ಸಾವು‌

Spread the love

ಕ್ಷುಲ್ಲಕ‌ ವಿಚಾರಕ್ಕೆ ಮಗಳು ಆತ್ಮಹತ್ಯೆ ಗೆ ಶರಣಾದರೆ, ಮಗಳ ಸಾವಿನ ಸುದ್ದಿ ತಿಳಿದ ಅಪ್ಪ ಆಘಾತ ಗೊಂಡ ಪರಿಣಾಮ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಜರುಗಿದೆ.

ತಳಗವಾದಿ ಗ್ರಾಮದ ರಾಜಣ್ಣನ ಪುತ್ರಿ ಬಾಂಧವ್ಯ (15) ಆತ್ಮಹತ್ಯೆ ಗೆ ಶರಣಾದರೆ, ರಾಜಣ್ಣ ( 65) ಹೃದಯಾಘಾತದಿಂದ ಸಾವನ್ನಪ್ಪಿದವರು. ವಿಶ್ವ ಅಪ್ಪಂದಿರ ದಿನವೇ ಮಗಳು ಹಾಗೂ ತಂದೆಯ ಅಂತ್ಯ ಸಂಸ್ಕಾರ ಮಾಡಲಾಗಿದೆ.

ರಾಜಣ್ಣನಿಗೆ 4 ಜನ‌ಹೆಣ್ಣು ಮಕ್ಕಳು.‌ ಕೊನೆಯ ಮಗಳು ಬಾಂಧವ್ಯ ಯಾವುದೋ ಒಂದು ಕ್ಷುಲ್ಲಕ ವಿಚಾರಕ್ಕೆ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನಾಲ್ಕು ಮಂದಿ ಹೆಣ್ಣು ಮಕ್ಕಳು ಮೂರು ಹೆಣ್ಣು ಮಕ್ಕಳು ಈಗಾಗಲೇ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಾಂಧವ್ಯ ಈ ವರ್ಷ 10 ನೇ ತರಗತಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣಕಾಸಿನ ತೊಂದರೆ ಉಂಟಾದ ಪರಿಣಾಮ ಮಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲು ಮಾಡಲು ಪೋಷಕರು ಮಾತುಕತೆ ನಡೆಸಿದ್ದಾರೆ.

ಆದರೆ ಕೊನೆ ಮಗಳು ಬಾಂಧವ್ಯ ಎಲ್ಲಾ ಅಕ್ಕಂದಿರನ್ನು ಖಾಸಗಿ ಪದವಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಿರಿ ನನ್ನನ್ನು ಮಾತ್ರ ಸರ್ಕಾರಿ ಕಾಲೇಜಿಗೆ ಸೇರಿಸುತ್ತಿದ್ದಿರಿ. ಎಂದು ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದಳು ಎನ್ನಲಾಗಿದೆ.

ಈ ಘಟನೆಯಿಂದ ಬೇಸತ್ತು ಬಾಂಧವ್ಯ ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಅಪ್ಪ ರಾಜಣ್ಣ ಆಘಾತಗೊಂಡರು. ಅವರಿಗೂ ಲೋ ಬಿಪಿ ಆಗಿದೆ. ತಕ್ಷಣವೇ ಅವರನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರೊಳಗೆ ರಾಜಣ್ಣ ಕೂಡ ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ ತಂದೆ , ಮಗಳ ಅಂತ್ಯಕ್ರಿಯೆ ತಗಳವಾದಿ ಗ್ರಾಮದಲ್ಲಿ ನಡೆಯಿತು.

error: Content is protected !!