December 23, 2024

Newsnap Kannada

The World at your finger tips!

elephant , dasara , gunshot

Dasara elephant Balarama injured by gunshot ದಸರಾ ಆನೆ ಬಲರಾಮನಿಗೆ ಗುಂಡೇಟು – ಫೈರಿಂಗ್‌ ಮಾಡಿದ್ದ ವ್ಯಕ್ತಿ ಬಂಧನ

ದಸರಾ ಆನೆ ಬಲರಾಮನಿಗೆ ಗುಂಡೇಟು – ಫೈರಿಂಗ್‌ ಮಾಡಿದ್ದ ವ್ಯಕ್ತಿ ಬಂಧನ

Spread the love

ದಸರಾ ಆನೆ ಬಲರಾಮ ಜಮೀನಿಗೆ ನುಗ್ಗಿದ ಕಾರಣಕ್ಕಾಗಿ ಬಂದೂಕಿನಿಂದ ಗುಂಡು ಹೊಡೆದು ಗಾಯಗೊಳಿಸಿದ ಜಮೀನು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದಲ್ಲಿದ್ದ ಜಮೀನಿಗೆ ಬಲರಾಮ ಆನೆ ಹೋಗಿತ್ತು. ಈ ವೇಳೆ ಜಮೀನಿನ ಮಾಲೀಕ ಸುರೇಶ್‌ ಎಂಬಾತ ಸಿಂಗಲ್‌ ಬ್ಯಾರಲ್‌ ಬಂದೂಕಿನಿಂದ ಆನೆಗೆ ಗುಂಡು ಹಾರಿಸಿದ್ದಾನೆ. ಇದರಿಂದ ಬಲರಾಮ ಆನೆ ತೊಡೆ ಭಾಗಕ್ಕೆ ಗುಂಡು ಹೊಕ್ಕಿ ಗಾಯಗೊಂಡಿತ್ತು.ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ – ಸಿಎಂ ಬೊಮ್ಮಾಯಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಸದ್ಯ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬಲರಾಮ‌ ಚೇತರಿಸಿಕೊಂಡಿದ್ದಾನೆ.

ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬಂದೂಕು, ಕಾರ್ಟ್ರಿಜ್‌ನ್ನು ವಶಪಡಿಸಿಕೊಳ್ಳಲಾಗಿದೆ. ಜಮೀನು ಮಾಲೀಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈಗ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬಲರಾಮ ಆನೆ ಮೈಸೂರು ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿತ್ತು. 14 ಬಾರಿ ಚಿನ್ನದ ಅಂಬಾರಿಯನ್ನು ದಸರಾ‌ ಮೆರವಣಿಗೆಯಲ್ಲಿ ಹೊತ್ತಿದೆ.

Copyright © All rights reserved Newsnap | Newsever by AF themes.
error: Content is protected !!