ಮೈಸೂರು: ನಗರದ ಬೆಂಗಳೂರು- ಮೈಸೂರು ಹೆದ್ದಾರಿಯ ಬಳಿ ಶುಕ್ರವಾರ ಎರಡು ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಸಂದರ್ಭ ದಸರಾ ದೀಪಾಲಂಕಾರಕ್ಕೆ ಹಾಕಿದ್ದ ಕಮಾನಿಗೆ ಗುದ್ದಿ ಮುರಿದು ಬಿದ್ದಿವೆ.
ದಸರಾಗೆ ಮೈಸೂರು ನಗರದಾದ್ಯಂತ ದೀಪಾಲಂಕಾರ ಮಾಡಲಾಗುತ್ತಿದೆ. ಎಲ್ಲೆಡೆ ತಾತ್ಕಾಲಿಕ ಕಬ್ಬಿಣದ ಕಮಾನು ಹಾಕಲಾಗುತ್ತಿತ್ತು. ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಖಾಸಗಿ ಬಸ್, ಕೆಎಸ್‍ಆರ್‍ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಅಪಘಾತವಾಗಿದೆ.
ಖಾಸಗಿ ಬಸ್ ದಸರಾ ದೀಪಾಲಂಕಾರದ ಕಮಾನಿಗೆ ಗುದ್ದಿದ ಪರಿಣಾಮ ಕಮಾನು ಕುಸಿದು ರಸ್ತೆಯಲ್ಲಿದ್ದ ಸಾರಿಗೆ ಬಸ್ ಮೇಲೆ ಬಿದ್ದಿದೆ. ಖಾಸಗಿ ಬಸ್ ಚಾಲಕ ಧಾವಂತದಲ್ಲಿ ಇನ್ನೋವಾ ಕಾರಿಗೆ ಗುದ್ದಿದ್ದಾನೆ. ಒಟ್ಟು 2 ಬಸ್ ಸೇರಿ 4 ವಾಹನಗಳಿಗೆ ಹಾನಿಯಾಗಿದೆ.ವಿದ್ಯುತ್ ಖರೀದಿ: ಕೆ.ಜೆ.ಜಾರ್ಜ್
15 ಜನರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೋಲೀಸರ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತದಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ