ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ನಿರ್ದೇಶಕರಾಗಿ ಡಿ.ಪಿ.ಮುರುಳೀಧರ್ ನೇಮಕ

Team Newsnap
1 Min Read
D. P. Murulidhar appointed as the new Director of News & Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ನಿರ್ದೇಶಕರಾಗಿ ಡಿ.ಪಿ.ಮುರುಳೀಧರ್ ನೇಮಕ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ನಿರ್ದೇಶಕರನ್ನಾಗಿ ಡಿ.ಪಿ ಮುರುಳೀಧರ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಅಧಿಸೂಚನೆ ಹೊರಡಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದಂತ ಡಿ.ಪಿ ಮುರುಳೀಧರ್ ಅವರನ್ನು, ಈ ತಕ್ಷಣದಿಂದ ಜಾರಿಗೆ ಬರುವಂತೆ ಗ್ರೂಪ್-ಎ ಹಿರಿಯ ಶ್ರೇಣಿಯ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದ್ದಾರೆ.

ಈ ಮೊದಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾಗ ಉತ್ತಮ ರೀತಿಯಲ್ಲಿ ಡಿ.ಪಿ ಮುರಳೀಧರ್ ಕಾರ್ಯ ನಿರ್ವಹಿಸುತ್ತಿದ್ದರು. ಈಗ ನಿರ್ದೇಶಕರನ್ನಾಗಿ ಮುಂಬಡ್ತಿ ನೀಡಿದ ಬಳಿಕ, ಇಂದೇ ಅಧಿಕಾರವನ್ನು ವಹಿಸಿಕೊಂಡರು. ಇದನ್ನು ಓದಿ – ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ 10 ರಂದು ಮತದಾನ – 13 ಕ್ಕೆ ಫಲಿತಾಂಶ

Share This Article
Leave a comment