July 7, 2022

Newsnap Kannada

The World at your finger tips!

yathnal 1

ಆರೋಗ್ಯ ಸಮಸ್ಯೆ ಹೇಳಿ ಹೊರ ಬಂದ ಡಿಕೆಶಿಯನ್ನು ಮತ್ತೆ ಜೈಲಿಗೆ ಹಾಕಬೇಕು -ಯತ್ನಾಳ್

Spread the love

ಮಾಜಿ ಸಚಿವ ಈಶ್ವರಪ್ಪನವರನ್ನು ಜೈಲಿಗೆ ಹಾಕೋದಲ್ಲ. ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಜೈಲಿಗೆ ಹಾಕಬೇಕು, ಹೀಗೆಂದು ವಾಗ್ದಾಳಿ ನಡೆಸಿದವರು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್.

ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್ ಅವರು, ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರುವಷ್ಟು ಶಕ್ತಿ ಇದೆ. ಅದೇ ದೆಹಲಿಯಲ್ಲಿ ನಿಮ್ಮನ್ನು ಜೈಲಿಗೆ ಹಾಕಿದಾಗ ಬಿಪಿ, ಶುಗರ್ ಹೆಚ್ಚಾಗಿದೆಯಂತೆ ಹೇಳಿ ಜಾಮೀನು ಪಡೆದುಕೊಂಡು ಬಂದಿದ್ದೀರಿ ಎಂದು ಯತ್ನಾಳ್ ಡಿಕೆಶಿ ಕಾಲೆಳದರು.

ನೀವು ಬ್ಯಾರಿಕೇಡ್ ಜಂಪ್ ಮಾಡುತ್ತೀರಾ ಎಂದರೆ ನೀವು ಫಿಟ್ ಆಗಿದ್ದೀರಿ ಅಂತಾ ಅರ್ಥ. ಆರೋಗ್ಯ ಸಮಸ್ಯೆ ಹೇಳಿ ಜೈಲಿನಿಂದ ಹೊರಗೆ ಬಂದಿದ್ದೀರಿ. ಇದನ್ನು ಕೋರ್ಟ್ ಪರಿಗಣಿಸಿ ಮತ್ತೆ ಜೈಲಿಗೆ ಡಿಕೆ ಶಿವಕುಮಾರ್ ಅವರನ್ನು ಕಳಿಸಬೇಕು ಎಂದು ಒತ್ತಾಯಿಸಿದರು.

error: Content is protected !!