ಜುಲೈ 15 ರಂದು ಸಾಂಸ್ಕೃತಿಕ ಹಬ್ಬ: ಕುಲಪತಿ ಡಾ.ಪುಟ್ಟರಾಜು

Team Newsnap
1 Min Read
Cultural Festival on 15th July: Chancellor Dr. Puttaraju ಜುಲೈ 15 ರಂದು ಸಾಂಸ್ಕೃತಿಕ ಹಬ್ಬ: ಕುಲಪತಿ ಡಾ.ಪುಟ್ಟರಾಜು #latestnews #culturalfestival

ಮಂಡ್ಯ : ಮಂಡ್ಯ ವಿಶ್ವವಿದ್ಯಾಲಯದ ವತಿಯಿಂದ ಜುಲೈ 15 ರಂದು ಬೆಳಿಗ್ಗೆ 9 ಗಂಟೆಗೆ ಮೊದಲ ಬಾರಿಗೆ ವಿವಿ ಆವರಣದಲ್ಲಿ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ತಿಳಿಸಿದರು.

ಮಂಡ್ಯ ವಿವಿ ಆಡಳಿತ ಭವನದ ಕುಲಪತಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಮಂಡ್ಯ ವಿಶ್ವವಿದ್ಯಾಲಯಕ್ಕೆ 2023-24ನೇ ಶೈಕ್ಷಣಿಕ ವರ್ಷದಿಂದ ಮಂಡ್ಯ ಜಿಲ್ಲೆಯ 47 ಕಾಲೇಜಿನ 25 ಸಾವಿರ ಮಕ್ಕಳು ಕೂಡ ವಿವಿಗೆ ಒಳಪಡುತ್ತಾರೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದರು‌.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಲಿದ್ದು, ಶಾಸಕ ಪಿ ರವಿಕುಮಾರ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಂಸದರಾದ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ವಿಧಾನಸಭಾ ಶಾಸಕರುಗಳಾದ ಪಿ.ಎಂ ನರೇಂದ್ರಸ್ವಾಮಿ, ಎ.ಬಿ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಹೆಚ್ ಟಿ ಮಂಜುನಾಥ್, ಕೆ.ಎಂ ಉದಯ್ ಭಾಗವಹಿಸಲಿದ್ದಾರೆ ಎಂದರು‌.ರಾಜ್ಯಾದ್ಯಂತ ಜುಲೈ 28ರಂದು ಆಟೋ ಚಾಲಕರ ಮುಷ್ಕರಕ್ಕೆ ಕರೆ

ಈ ಸಾಂಸ್ಕೃತಿಕ ಹಬ್ಬದಲ್ಲಿ 4000 ಮಕ್ಕಳು ಭಾಗಿಯಾಗಲಿದ್ದು, ಫ್ಯಾಷನ್ ಸೋ, ಜಾನಪದ ಕಲೆ, ಎಥ್ನಿಕ್ ವೇರ್, ಕ್ಯಾಂಡಿಡ್ ಫೋಟೋ, ಗ್ರೂಪ್ ಫೋಟೋ, ಆಹಾರದ ಮಳಿಗೆ, ತಿಂಡಿ ಪ್ರದರ್ಶನ, ಜಾನಪದ ಉತ್ಸವ ಹಾಗೂ ಮಾರಾಟ ಮಳಿಗೆ ಸೇರಿದಂತೆ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವದಲ್ಲಿ ಪಾಲ್ಗೊಂಡವರಿಗೆ ಪ್ರೊತ್ಸಾಹ ನೀಡಿ ಗೌರವಿಸಲಾಗುತ್ತದೆ ಎಂದರು‌.

Share This Article
Leave a comment