ಐಪಿಎಲ್ 20-20ಯ 47ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ, ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್‌ಗಳ ಜಯಭೇರಿ ಬಾರಿಸಿತು.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ಫೀಲ್ಡಿಗಿಳಿದ ಶುಭಮನ್ ಗಿಲ್ ಹಾಗೂ ನಿತೀಶ್ ರಾಣಾ ಅವರ ಜೋಡಿಯಾಟದ ಆರಂಭ ಆಕರ್ಷಕವಾಗಿತ್ತು. ಆದರೆ ತಂಡ ಪಂದ್ಯದಲ್ಲಿ ತಂಡ ಪರಾಜಯಗೊಳ್ಳಲೇಬೇಕಾಯಿತು. ಗಿಲ್ ಕೇವಲ 26 ರನ್‌ಗಳಿಗೆ ಕರ್ಣ ಶರ್ಮಾ ಅವರ ಬೌಲಿಂಗ್‌ಗೆ ಬೋಲ್ಡ್ ಆದರು. ರಾಣಾ ಅವರು ಪಂದ್ಯದಲ್ಲಿ ತಂಡ ಗೆಲುವಿನ ಹೊಸ್ತಿಲನ್ನು ತುಳಿಯುವಲ್ಲಿ ಸಾಕಷ್ಟು ಶ್ರಮ ವಹಿಸಿದರೂ ಅವರ ಪ್ರಯತ್ನ ಸಫಲವಾಗಲಿಲ್ಲ. ರಾಣಾ 61 ಎಸೆತಗಳಿಗೆ 87 ರನ್ ಗಳಿಸಿದರು. ನಂತರದ ಬ್ಯಾಟ್ಸ್‌ಮನ್‌ಗಳ ಆಟ ಅಷ್ಟೊಂದು ಉತ್ಸಾಹದಾಯಕವಾಗಿರಲಿಲ್ಲ. ಕೆಕೆಆರ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಕೆಕೆಆರ್ ನೀಡಿದ ಗುರಿಗೆ ಪ್ರತಿಯಾಗಿ ಸಿಎಸ್‌ಕೆ ತಂಡದಿಂದ ಎಸ್. ವ್ಯಾಟ್ಸನ್ ಹಾಗೂ ಆರ್. ಗಾಯಕ್ವಾಡ್ ಅವರು ಫೀಲ್ಡಿಗೆ ಬಂದರು. ವ್ಯಾಟ್ಸನ್ 19 ಎಸೆತಗಳಿಗೆ 14 ರನ್ ಗಳಿಸಿದರೆ, ಗಾಯಕ್ವಾಡ್ 53 ಎಸೆತಗಳಿಗೆ 72 ರನ್ ಮೊತ್ತವನ್ನು ತಂಡಕ್ಕೆ ನೀಡಿದರು. ನಂತರ ಬಂದ ಅಂಬಾಟಿ ರಾಯುಡು ಗಾಯಕ್ವಾಡ್ ಅವರೊಡನೆ ಉತ್ತಮ ಸಹಕಾರ ಪ್ರಯತ್ನ ಸಫಲವಾಯಿತು. ರಾಯುಡು 20 ಎಸೆತಗಳಿಗೆ 38 ರನ್ ಗಳಿಸಿದರು. ಸಿಎಸ್‌ಕೆ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಪಂದ್ಯದ ಜಯಮಾಲೆಯನ್ನು ತನ್ನದಾಗಿಸಿಜೊಂಡಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ