ಐಪಿಎಲ್ 20-20ಯ 28ನೇ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ರನ್‌ಗಳ ಅದ್ಭುತ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಸಿಎಸ್‌ಕೆ ಪರ ಬ್ಯಾಟಿಂಗ್ ಆರಂಭಿಸಿದ ಆರೋನಾ ಎಸ್. ಕರನ್ ಹಾಗೂ ಫಾಫ್ ಡು ಪ್ಲೆಸಿಸ್ ಆಟಕ್ಕೆ ಸಾಧಾರಣ ಆರಂಭ ನೀಡಿದರು. ನಿರೀಕ್ಷಿತ ಆಟಗಾರ ಪ್ಲೆಸಿಸ್ ಒಂದೂ ರನ್ ಗಳಿಸದೇ ಪೆವಿಲಿಯನ್ ಸೇರಿದರು. ಕರನ್ 21 ಎಸೆತಗಳಲ್ಲಿ 31 ರನ್ ಗಳಿಕೆ ಮಾಡಿದರೆ, ನಂತರ ಬಂದ ವ್ಯಾಟ್ಸನ್ 38 ಎಸೆತಗಳಿಗೆ 46 ರನ್ ಹಾಗೂ ಅಂಬಾಟಿ ರಾಯುಡು 31 ಎಸೆತಗಳಿಗೆ 41 ರನ್ ಗಳಿಸಿ ತಂಡ ಮುನ್ನಡೆಸುವಲ್ಲಿ ತಮ್ಮ ಕೊಡುಗೆ ನೀಡಿದರು. ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ಸಾಧಾರಣ ಗುರಿಯನ್ನು ಬೆಂಬತ್ತಿದ ಎಸ್‌ಆರ್‌ಹೆಚ್ ತಂಡದಿಂದ ಡಿ. ವಾರ್ನರ್ ಹಾಗೂ ಜೆ. ಬೇರ್ಸ್ಟೋವ್ ಮೈದಾನಕ್ಕಿಳಿದರು. ವಾರ್ನರ್ 13 ಎಸೆತಗಳಿಗೆ 9 ರನ್ ಹಾಗೂ ಬೇರ್ಸ್ಟೋವ್ 24 ಎಸೆತಗಳಿಗೆ 23 ರನ್ ಗಳಿಸಿ ಪೆವಿಯನ್ ಸೇರಿಕೊಂಡರು. ನಂತರ ಬಂದ ಕೆ. ವಿಲಿಯಮ್ಸನ್ 39 ಎಸೆತಗಳಲ್ಲಿ 57 ರನ್ ಗಳಿಸಿದರೂ ತಂಡಕ್ಕೆ ಲಾಭವಾಗಲಿಲ್ಲ. ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸೋತಿತು.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ