December 24, 2024

Newsnap Kannada

The World at your finger tips!

HIRENAGAVALLI

ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ- ಕ್ರಷರ್ ಮಾಲೀಕ, ನಾಗರಾಜು , ಬ್ಲಸ್ಟರ್ ಗಣೇಶ್ ಬಂಧನ‌

Spread the love

ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಜಿಲೇಟಿನ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕ್ರಷರ್ ಮಾಲೀಕ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ‌

ಸ್ಫೋಟಗೊಂಡ ಬಳಿಕ ನಾಗರಾಜು ರೆಡ್ಡಿ ತಲೆಮರೆಸಿಕೊಂಡಿದ್ದನು.

ನಾಗರಾಜು ರೆಡ್ಡಿಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದ ಬ್ಲಾಸ್ಟರ್ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

HIRENAGAVALLI1

ಎ2 ಆರೋಪಿ, ಕ್ರಷರ್ ಮಾಲಿಕ ರಾಘವೇಂದ್ರ ರೆಡ್ಡಿಯನ್ನು ನಿನ್ನೆ ಬಂಧಿಸಲಾಗಿತ್ತು.

ಇಬ್ಬರು ಪೋಲಿಸ್ ಅಧಿಕಾರಿಗಳ ಅಮಾನತ್ತು:

ದುರಂತ ಸಂಬಂಧ ಕರ್ತವ್ಯಲೋಪದ ನ ಮೇಲೆ ಗುಡಿಬಂಡೆ ಎಸ್‍ಐ ಗೋಪಾಲ್ ರೆಡ್ಡಿ, ಇನ್‍ಸ್ಪೆಕ್ಟರ್ ಮಂಜುನಾಥ್‍ರನ್ನು ಅಮಾನತು ಮಾಡಲಾಗಿದೆ.

ಶಿವಮೊಗ್ಗ ಸ್ಫೋಟದ ಬಳಿಕ ಬ್ಲಾಸ್ಟಿಂಗ್ ನಿಲ್ಲಿಸಿದ್ದ ಕಾರಣ ಹಿರೇನಾಗವಲ್ಲಿಯಲ್ಲಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ಉಮಾಮಹೇಶ್ ನಾಶ ಮಾಡಲು ಮುಂದಾಗಿದ್ದ. ಆದರೆ ಅದಾಗಲೇ ಸ್ಥಳದಲ್ಲಿ ಕೆಲವರು ಬೆಂಕಿ ಹಾಕಿಕೊಂಡು ಚಳಿ ಕಾಯಿಸ್ತಿದ್ದರು. ಈ ವೇಳೆ ಸ್ಫೋಟಕಗಳನ್ನು ನೀರಿಗೆ ಹಾಕುವ ಬದಲು ಬೆಂಕಿಗೆ ಹಾಕಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಈ ಮಧ್ಯೆ ಹಿರೇನಾಗವಲ್ಲಿ ದುರಂತದಿಂದ ಆತಂಕಗೊಂಡಿರುವ ಬಾಗೆಪಲ್ಲಿಯ ಪುಟ್ಟಪರ್ತಿ ಗ್ರಾಮಸ್ಥರು, ಸ್ಫೋಟಕಗಳ ಗೋದಾಮು ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!