ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭರ್ಜರಿ ಆಫರ್

Team Newsnap
1 Min Read

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಯಾವುದೇ ನಿಲುವು ಪ್ರಕಟಿಸದೇ ತಟಸ್ಥ ಧೋರಣೆ ತೋರಿದ
ಭಾರತಕ್ಕೆ ರಷ್ಯಾ ಕಚ್ಚಾ ತೈಲಕ್ಕೆ ಭರ್ಜರಿ ಆಫರ್ ಪ್ರಕಟಿಸಿದೆ.

ಬ್ರೆಂಟ್ ಕಚ್ಚಾ ತೈಲ ದರಕ್ಕಿಂತ ಶೇ.25-27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ.

ರಷ್ಯಾದ ಪ್ರತಿಷ್ಠಿತ ಕಚ್ಚಾ ತೈಲ ಕಂಪನಿಗಳಲ್ಲಿ ಒಂದಾದ ರೋಸ್ನೆಫ್ಟ್ ಆಯಿಲ್ ಕಂಪನಿಯೂ ಭಾರತಕ್ಕೆ ಬ್ರೆಂಟ್ ಕಚ್ಚಾ ತೈಲವನ್ನು ನೀಡಲು ಮುಂದಾಗಿದೆ.

ರಷ್ಯಾ ದಾಳಿಯಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಾಣುತ್ತಿದೆ. ಈ ಬೆನ್ನಲ್ಲೇ ಭಾರೀ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ನೀಡಲು ರಷ್ಯಾ ಮುಂದಾಗಿದೆ ಎಂದು ವರದಿಯಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಬಂದಾಗ ರೋಸ್ನೆಫ್ಟ್ ಆಯಿಲ್ ಕಂಪನಿ ಹಾಗೂ ಭಾರತದ ತೈಲ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ 2022ರ ಕೊನೆಯವರೆಗೆ ಭಾರತಕ್ಕೆ 2 ಮಿಲಿಯನ್ ಟನ್ ತೈಲವನ್ನು ನೊವೊರೊಸಿಸ್ಕ್ ಬಂದರಿನ ಮೂಲಕ ರಫ್ತು ಮಾಡಲು ಒಪ್ಪಿಕೊಂಡಿತ್ತು.

ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುವ ಪ್ರಮಾಣ ಕಡಿಮೆ. ಶೇ.70 ರಷ್ಟು ತೈಲವನ್ನು ಒಪೆಕ್ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತದೆ.

Share This Article
Leave a comment