ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಕೋಟಿ,ಕೋಟಿ ಹಣ ಜಮೆ

Team Newsnap
1 Min Read

ಆ ಇಬ್ಬರು ಬಾಲಕರು ಆರನೇ ತರಗತಿ ವಿದ್ಯಾರ್ಥಿಗಳು. ಆದರೆ ಅವರ ಖಾತೆಗೆ ಕೋಟಿ, ಕೋಟಿ ರೂ.ಹಣ ಜಮೆಯಾಗಿದೆ. ಇದನ್ನು ನಂಬಬೇಕಾ ಅಂದರೆ ಹೌದು ಎನ್ನಬೇಕಾಗಿದೆ. ಏಕೆಂದರೆ ಈ ವಿಷಯವನ್ನು ಹಿರಿಯ ಅಧಿಕಾರಿಯೊಬ್ಬರೇ ದೃಢಪಡಿಸಿದ್ದಾರೆ.


ಈ ಅಚ್ಚರಿ ಘಟನೆ ನಡೆದಿರುವುದಾದರೂ ಎಲ್ಲಿ ಅಂದರೆ, ಬಿಹಾರ್ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿ. ಆದರೆ ಹಣದ ಮೂಲ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಸೆಪ್ಟೆಂಬರ್ 15 ರಂದು ಬಗಹುರ ಪಂಚಾಯತ್‌ನ ಪಾಸ್ಟಿಯಾ ಗ್ರಾಮದ ಆರನೇ ತರಗತಿ ವಿದ್ಯಾರ್ಥಿಗಳಾದ ಆಶಿಶ್ ಕುಮಾರ್ ಖಾತೆಗೆ 6,20,11,100 ಮತ್ತು ಗುರುಚರಣ್ ಬಿಸ್ವಾಸ್ 90,52,21, 233 ರೂ. ಜಮಾ ಆಗಿದೆ. ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನಲ್ಲಿ ಈ ವಿದ್ಯಾರ್ಥಿಗಳ ಖಾತೆ ಇರುವುದು.


ಕತಿಹಾರ್ ಜಿಲ್ಲಾಧಿಕಾರಿ ಉದಯನ್ ಮಿಶ್ರಾ ಈ ಇಬ್ಬರ ಖಾತೆ ಕೋಟಿ,ಕೋಟಿ ಹಣ ಜಮೆಯಾಗಿರುವುದನ್ನು ದೃಢಪಡಿಸಿದ್ದಾರೆ. ಮಿನಿಸ್ಟೇಟ್‌ಮೆಂಟ್‌ಗಳಲ್ಲಿ ಇದನ್ನು ಕಾಣಬಹುದು. ಈ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಗುತ್ತಿದೆ ಎಂದರು.


ಭಾರಿ ಮೊತ್ತದ ಹಣ ಜಮೆಯಾದ ಮಾಹಿತಿ ಅರಿಯುತ್ತಲೇ ಆ ಎರಡೂ ಖಾತೆಯನ್ನು ಸ್ಥಗಿತಗೊಳಿಸಿದ್ದೇವೆ. ಹಣ ಹಿಂಪಡೆಯುವಿಕೆಯನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಆ ವಿದ್ಯಾರ್ಥಿಗಳ ಪೋಷಕರನ್ನು ಕೇಳಿದಾಗ ಹಣದ ಮೂಲ ತಿಳಿದಿಲ್ಲ ಎಂದು ಗೊತ್ತಾಗಿದೆ. ಈ ಹಣ ಕಳುಹಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Share This Article
Leave a comment