January 11, 2025

Newsnap Kannada

The World at your finger tips!

a4c015ea 77e8 4fad 8bcb f1d2ac3c1947 1

ಕೋಟ್ಯಾಂತರ ರು ಪಂಗನಾಮ ಹಾಕಿದ ಮಹಿಳೆಗೆ ಸ್ಯಾಂಡಲ್ ವುಡ್ ನಟ, ಸಹೋದರರೂ ಸಾಥ್

Spread the love

ಚಿಕ್ಕಬಳ್ಳಾಪುರ ನಗರದ ಮಹಾವಂಚಕಿ ಜೊತೆಗೆ ಕನ್ನಡ ಸಿನಿಮಾ ನಟನೊಬ್ಬ ಸೇರಿ ಸಿಕ್ಕ ಸಿಕ್ಕವರಿಗೆ ಕೋಟ್ಯಾಂತರ ರು ಪಂಗನಾಮ‌ ಹಾಕಿದ ಪ್ರಕರಣ ದಾಖಲಾಗಿದೆ.

ಅರ್ಚನಾ ಎಂಬ ಮಹಿಳೆಯೇ ವಂಚನೆ ಜಾಲದ ರುವಾರಿ. ಈ ಪ್ರಕರಣ ದಲ್ಲಿ ಸ್ಯಾಂಡಲ್​ವುಡ್​ ನಟ ಶಂಕರ್​ 2ನೇ ಆರೋಪಿ. ಈತ ಅರ್ಚನಾಳ ಪ್ರಿಯಕರ ಕೂಡ ಹೌದು ಎನ್ನಲಾಗಿದೆ.

ಇವರ ಜತೆಗೆ ಅರ್ಚನಾ ಸಹೋದರ ಹರೀಶ್​ ಮತ್ತು ಶ್ರೀಪತಿ 3 ಮತ್ತು 4ನೇ ಆರೋಪಿಗಳಾಗಿದ್ದಾರೆ. ಈ ನಾಲ್ವರು ಸೇರಿ ಮಾಡಿದ ಮಹಾವಂಚನೆಯಿಂದ ಜನ ಮೋಸ ಹೋಗಿದ್ದಾರೆ.‌

ಬೆಂಗಳೂರು, ಹೈದರಬಾದ್, ಮುಂಬೈನಲ್ಲಿ ಅರ್ಚನಾ ತನ್ನ ವಂಚನೆಯ ಬಲೆಯನ್ನು ಬೀಸಿದ್ದಳು. ನನ್ನ ಬಳಿ ರೈಸ್ ಪುಲ್ಲಿಂಗ್ ಚೆಂಬು ಇತ್ತು. ಅದನ್ನು ವಿದೇಶದ ವ್ಯಕ್ತಿಗೆ ಮಾರಾಟ ಮಾಡಿದ್ದೇನೆ. ಇದರಿಂದ, 6 ಲಕ್ಷ 36 ಸಾವಿರ ಕೋಟಿ ರು ಆದಾಯ ಬಂದಿದೆ. ಆರ್​ಬಿಐ ಮೂಲಕ ಈ ಹಣ ಪಡೆಯಲು 240 ಕೋಟಿ ರು. ತೆರಿಗೆ ಕಟ್ಟಬೇಕು. ಟ್ಯಾಕ್ಸ್ ಕಟ್ಟಲು ಹಣವಿಲ್ಲ. ನೀವು ಕೊಟ್ಟರೆ ತೆರಿಗೆ ಪಾವತಿಸಿ ಆರ್​ಬಿಐ ನಿಂದ ಎಲ್ಲಾ ಹಣವನ್ನೂ ಪಡೆಯುವೆ. ಆ ಕೂಡಲೇ ನಿಮ್ಮ ಹಣವನ್ನು ವಾಪಸ್​ ಮಾಡುವೆ ಎಂದು ಕಥೆ ಹೇಳಿ ಹಲವರ ಬಳಿ ಕೋಟಿ ಕೋಟಿ ಹಣ ಪೀಕಿದ್ದಾಳೆ.

ಅದೇ ರೀತಿ ಬೆಂಗಳೂರು ಮೂಲದ ಉದ್ಯಮಿ ವಂಶಿಕೃಷ್ಣ ಬಳಿ 2.2.ಕೋಟಿ ಹಣ ಪಡೆದು ಕೈ ಎತ್ತಿದ್ದಾಳೆ ಎಂದು ವಂಶಿಕೃಷ್ಣ ಚಿಕ್ಕಬಳ್ಳಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಚನಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಯಾಂಡಲ್​ವುಡ್ ನಟ ಶಂಕರ್ ಸಾಥ್ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ. ಶಂಕರ್​ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಅರ್ಚನಾಗೂ ಶಂಕರ್​ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!