ಮಂಡ್ಯ ನಗರದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಿದರೆ ಕ್ರಿಮಿನಲ್ ಕೇಸ್- ನಗರಸಭಾ ಅಧ್ಯಕ್ಷ ಮಂಜು

Team Newsnap
2 Min Read
Canada bans foreigners from buying houses ವಿದೇಶಿಯರಿಗೆ ಮನೆ ಖರೀದಿಗೆ ನಿಷೇಧ ಹೇರಿದʻಕೆನಡಾ

ಮಂಡ್ಯ ನಗರದಲ್ಲಿ ಅಗ್ಗದ ಪ್ರಚಾರಕ್ಕಾಗಿ ಕೆಲವರು ಅವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕ್ರಮ ಅನುಸರಿಸುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಮಂಡ್ಯ ನಗರಸಭಾಧ್ಯಕ್ಷ ಎಚ್. ಎಸ್. ಮಂಜು ಎಚ್ಚರಿಸಿದ್ದಾರೆ .

ಮಂಡ್ಯದಲ್ಲಿ ಸುದ್ದಿಗಾರರ ಜೊತೆ. ಮಾತನಾಡಿದ ಮಂಜು ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ಸಣ್ಣ ಪುಟ್ಟ ಅಪಘಾತಗಳು ನಡೆದಿದೆ. ಇದನ್ನೇ ಗುರಿಯಾಗಿಟ್ಟುಕೊಂಡ ಕೆಲವರು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ” ಎಂದು ದೂರಿದರು.ಜೀವ ಬೆದರಿಕೆ ಆರೋಪ : ಕಾಮಿಡಿ ಕಿಲಾಡಿ ನಟಿ ಹುಬ್ಬಳ್ಳಿ ನಯನಾ ವಿರುದ್ಧ FIR

ಸಾರ್ವಜನಿಕ ರಸ್ತೆಗಳು ಸರ್ಕಾರದ ಆಸ್ತಿಗಳಾಗಿವೆ. ಇವುಗಳನ್ನು ಜೋಪಾನ ಮಾಡುವುದು, ಚೆನ್ನಾಗಿ ಇಟ್ಟುಕೊಳ್ಳುವ ಕೆಲಸ ಸಾರ್ವಜನಿಕರದ್ದೂ ಆಗಿದೆ. ಗುಂಡಿಗಳನ್ನು ಮುಚ್ಚುವಾಗ ಇಂಜಿನಿಯರ್‌ಗಳ ಸಲಹೆ ಪಡೆಯಬೇಕು. ವೆಟ್ ಮಿಕ್ಸ್ ಹಾಕಿ ಅದಕ್ಕೆ ರೋಲ್ ಮಾಡಿ ಆಗಿಂದಾಗ್ಗೆ ನೀರು ಹಾಕಿ ಹದ ಮಾಡಬೇಕಾಗಿರುತ್ತದೆ. ಸುಖಾಸುಮ್ಮನೆ ಪುಕ್ಕಟ್ಟೆ ಪ್ರಚಾರಕ್ಕಾಗಿ ಕೆಲವರು ಗುಂಡಿಗಳಿಗೆ ವೆಟ್‌ಮಿಕ್ಸ್ ತಂದು ಸುರಿದು ಗೊಂದಲ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿಯೂ ದೂರುಗಳು ಬಂದಿವೆ.

ರಾಜ್ಯ ಸರ್ಕಾರದ ವತಿಯಿಂದ ಮಂಡ್ಯ ರಸ್ತೆ ದುರಸ್ತಿ 28 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 1.27 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಉಳಿದಂತೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡು ಮಂಗಳವಾರ ಅಥವಾ ಬುಧವಾರದೊಳಗೆ ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ 15ನೇ ಹಣಕಾಸು ಯೋಜನೆಯಲ್ಲಿ 5 ಕೋಟಿ ಅನುದಾನ ಲಭ್ಯವಿದೆ. ಈ ಪೈಕಿ 3 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪ್ರಾರಂಭವಾಗಿವೆ. 2 ಕೋಟಿ ರೂ. ವೆಚ್ಚದ ಕಾಮಗಾರಿಗಳು ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿವೆ ಎಂದರು.

ಯಾರೂ ಕೂಡ ಅವೈಜ್ಞಾನಿಕವಾಗಿ ಗುಂಡಿ ಮುಚ್ಚಬಾರದು

ಸರ್ಕಾರದಿಂದ ಬಂದಿರುವ ಹಣ ಹಾಗೂ ನಮ್ಮಲ್ಲಿರುವ ಲಭ್ಯ ಅನುದಾನದಲ್ಲಿ ಎರಡು ತಿಂಗಳೊಳಗೆ ಮಂಡ್ಯ ನಗರದ ಎಲ್ಲ ರಸ್ತೆಗಳನ್ನೂ ಸಹ ಸಂಪೂರ್ಣವಾಗಿ ದುರಸ್ತಿ ಮಾಡಲಾಗುವುದು. ಆದರೆ ಮಳೆ ಬಂದರೆ ಕಾಮಗಾರಿಗೆ ಅಡ್ಡಿಯಾಗುತ್ತದೆ. ಇಲ್ಲದಿದ್ದರೆ ಯಾವುದೇ ಸಮಸ್ಯೆಯೂ ಇಲ್ಲದೆ ಸಮರ್ಪಕವಾಗಿ ಕೆಲಸ ಪೂರ್ಣವಾಗಿ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿರುತ್ತವೆ. ಆದರೆ ಯಾರೂ ಕೂಡ ಅವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕ್ರಮ ಅನುಸರಿಸಬಾರದು ಎಂದು ಎಚ್.ಎಸ್. ಮಂಜು ಸ್ಪಷ್ಟಪಡಿಸಿದರು.

Share This Article
Leave a comment