July 30, 2025

Newsnap Kannada

The World at your finger tips!

b8c5c52b d7bc 4169 8048 ae34a9e42abd

ಪತಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪತ್ನಿ ಸುನೀತಾ

Spread the love

ಯುವಕನ ಜೊತೆ ಸೇರಿ ತನ್ನ ಪತಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಘಟನ ಚನ್ನರಾಯಪಟ್ಟಣದಲ್ಲಿ ಜರುಗಿದೆ

ಆನಂದ್ ಕುಮಾರ್(42) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ ಪತ್ನಿ ಸುನಿತಾಳನ್ನು ಪೊಲೀಸರು ಬಂಧಿಸಿದ್ದಾರೆ

ಚನ್ನರಾಯಪಟ್ಟಣ ತಾಲೂಕು ಕಾವಲುಹೊಸೂರಿನಲ್ಲಿ ಜ. 31ರಂದು ಮಕ್ಕಳನ್ನು ಶಾಲೆಯಿಂದ ಕರೆತರಲು ಹೊರಟಿದ್ದ ವೇಳೆ ರಸ್ತೆ ಮಧ್ಯೆ ಆನಂದ್​​ ಬೈಕ್​​ ಅಡ್ಡಗಟ್ಟಿ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದನು.

ಈ ವೇಳೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ನಾಲ್ಕೈದು ಆಯಾಮಗಳಿಂದ ಆರೋಪಿ ಪತ್ತೆಹಚ್ಚುವಲ್ಲಿ ಹರಸಾಹಸ ಮಾಡಿದ್ದರು

ಈ ವೇಳೆ, ಅನುಮಾನಗೊಂಡ ಪೊಲೀಸರು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ನನಗೆ ಏನು ಗೊತ್ತಿಲ್ಲ ಎಂದು ತಪ್ಪಿಸಿಕೊಂಡಿದ್ದಳು.

ಆದರೆ, ತಾಂತ್ರಿಕ ತನಿಖೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಳು.

ವಿಚಾರಣೆ ವೇಳೆ ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸುವ ಮೂಲಕ ಹಂತಕಿಯಾಗಿದ್ದಾಳೆ.

ಪತಿ ಆನಂದ್ ಮತ್ತು ಸುನಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2014ರಲ್ಲಿ ಸುನಿತಾ ಡ್ರೈವಿಂಗ್ ಕಲಿಯಬೇಕು ಎಂದಾಗ ಆನಂದ್ ತರಬೇತಿ ಶಾಲೆಗೆ ಸೇರಿಸಿದ್ದನು. ಈ ವೇಳೆ ಡ್ರೈವಿಂಗ್ ಕಲಿಯುವಾಗ ಬೇರೆ ಮಹಿಳೆಯೊಂದಿಗೆ ಗಲಾಟೆ ಮಾಡಿಕೊಂಡು ಆಕೆಯನ್ನು ಕೊಲೆ ಮಾಡಿ ಜೈಲಿಗೆ ಸೇರಿದಳು.

ಜೈಲಿನಿಂದ ಹೊರಬಂದು ಗಂಡನೊಂದಿಗೆ ಸಂಸಾರ ಮಾಡುತ್ತಿದ್ದಳು. ಆದರೆ, ಕೋವಿಡ್​-19 ನಂತರದ ದಿನಗಳಲ್ಲಿ ಯೋಗ ತರಬೇತಿಗೆ ಸೇರಿದ ಸುನಿತಾ ಯೋಗ ಕ್ಲಾಸ್​​ನಲ್ಲಿ ನವೀನ್ ಎಂಬಾತನೊಂದಿಗೆ ಪರಿಚಯ ಮಾಡಿಕೊಂಡಿದ್ದಳು.

ಪರಿಚಯವಾಗಿ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಅನೈತಿಕ ಸಂಬಂಧದ ಮೂಲಕ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದರು.

ಈ ವಿಚಾರ ಗಂಡನಿಗೆ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಜಗಳ ಶುರುವಾಗಿತ್ತು. ಅಕ್ರಮ ಸಂಬಂಧದ ವಿಚಾರ ಗಂಡನಿಗೆ ಗೊತ್ತಾದ ಹಿನ್ನಲೆಯಲ್ಲಿ ಪತಿಯನ್ನು ಮುಗಿಸಬೇಕೆಂದು ಯೋಚಿಸಿ ತನ್ನ ಪ್ರಿಯಕರ ನವೀನ್ ಜೊತೆ ಸೇರಿಕೊಂಡು ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಳು.

ಐದು ದಿನದ ಬಳಿಕ ಕೊಲೆ ಪ್ರಕರಣ ಬೇಧಿಸುವಲ್ಲಿ ಚನ್ನರಾಯಪಟ್ಟಣ ಹಾಗೂ ನುಗ್ಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

error: Content is protected !!