ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ BMTC ಬಸ್ ನಲ್ಲಿ ಪ್ರಯಾಣ

Team Newsnap
1 Min Read

ಬೆಂಗಳೂರು ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕುಂಬ್ಳೆ ಅವರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಬೆಂಗಳೂರು ಬಂದ್ ಹಿನ್ನೆಲೆ ಕ್ಯಾಬ್ ಇಲ್ಲದಿರುವ ಮಾಹಿತಿ ನೀಡಿದ್ದಾರೆ. ಇದರಿಂದ ಬಿಎಂಟಿಸಿ ವಾಯುವಜ್ರ ಬಸ್ ಏರಿ ಅವರು ಮನೆ ಕಡೆ ತೆರಳಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ, ಈ ಬಗ್ಗೆ ಸೆಲ್ಫಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಅದರಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿನ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಮತ್ತು ವಿವಿಧ ಖಾಸಗಿ ಚಾಲಕರ ಸಂಘಗಳು ಆಯೋಜಿಸಿದ್ದ ಪ್ರತಿಭಟನೆಗಳ ನಡುವೆ ಈ ಟ್ವೀಟ್ ಬಂದಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸುವ ಶಕ್ತಿ ಯೋಜನೆಗೆ ಪ್ರತಿಕ್ರಿಯೆಯಾಗಿ ಅವರ ಪ್ರದರ್ಶನವಾಗಿತ್ತು.

ಆಟೋ , ಕ್ಯಾಬ್ ಚಾಲಕರ ಬೇಡಿಕೆ ಈಡೇರಿಸಲ್ಲ : ಸಿಎಂ ಸಿದ್ದರಾಮಯ್ಯ

ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆಯನ್ನು ನಿವಾರಿಸಲು, ಸರ್ಕಾರವು ದಿನವಿಡೀ ಹೆಚ್ಚುವರಿ ಬಸ್ ಮತ್ತು ಮೆಟ್ರೋ ಸೇವೆಗಳನ್ನು ಪರಿಚಯಿಸಿತು.

ಬಸ್‌ನಲ್ಲಿ ಕುಂಬ್ಳೆ ನಿಂತುಕೊಂಡೆ ಪ್ರಯಾಣ ಮಾಡಿರುವುದು ಬಸ್‌ಗಳಿಗೆ ಇದ್ದ ಡಿಮ್ಯಾಂಡ್ ನಿದರ್ಶನ ಎಂಬಂತಿದೆ. ಕ್ಯಾಬ್‌ಗಳಿಲ್ಲದ ಕಾರಣ ಬಹುತೇಕ ಪ್ರಯಾಣಿಕರು ಬಸ್‌ನತ್ತ ಮುಖ ಮಾಡಿದ್ದಾರೆ. ಕ್ಯಾಬ್‌ಗಳ ಬಂದ್ ಹಿನ್ನಲೆ ಯಲ್ಲಿ ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ಹೆಚ್ಚುವರಿ ವಾಯುವಜ್ರ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ BMTC ಬಸ್ ನಲ್ಲಿ ಪ್ರಯಾಣ – Former cricketer Anil Kumble traveled in BMTC bus #cricket #anilkumble #mysore #bengaluru

Share This Article
Leave a comment