14 ತಿಂಗಳು ಸಿಎಂ ಆಗಿದ್ದ ವೇಳೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಸಲೀಲೆ ಆಡಿಕೊಂಡಿದ್ದರು ಎಂಬ
ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಕೆಂಡಕಾರಿರುವ ಮಾಜಿ ಸಿಎಂ, ಸಿಪಿವೈಗೆ ಹುಚ್ಚು ಹಿಡಿದಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ಅವನ್ಯಾವನು ರೀ.. ಯೋಗೇಶ್ವರ್. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ. ನಾನು ದಾರಿ ತಪ್ಪಿದ್ದು ಒಂದೇ ಬಾರಿ. ಅಧಿವೇಶನದಲ್ಲೇ ನಾನು ಒಪ್ಪಿಕೊಂಡಿದ್ದೇನೆ. ನನ್ನ ಬದುಕು ತೆರೆದ ಪುಸ್ತಕ ಎಂದರು
ಚನ್ನಪಟ್ಟಣದಲ್ಲಿ ಯೋಗೇಶ್ವರ್ದು ಮುಗಿದ ಅಧ್ಯಾಯ. ನಾನು ಚನ್ನಪಟ್ಟಣ ಬಿಟ್ಟು ಓಡಿ ಹೋಗಲ್ಲ. ಬಸ್ ನಿಲ್ದಾಣದಲ್ಲಿ ಮಣ್ಣು ತೆಗೆದಿದ್ದಕ್ಕೆ 4 ಕೋಟಿ ರೂಪಾಯಿ ಬಿಲ್ ಮಾಡಿದ್ದಾರೆ. ಇದಕ್ಕೆ ನಾನು ಬಿಲ್ ಮಾಡಿಸ್ಬೇಕಾ ಎಂದು ಪ್ರಶ್ನಿಸಿದರು.
ನನಗೆ ಸರ್ಟಿಫಿಕೇಟ್ ಕೊಡೋದು ಇವನು ಅಲ್ಲ, ಜನ ನನಗೆ ಸರ್ಟಿಫಿಕೇಟ್ ನೀಡೋದು. ನನ್ನ ಬಗ್ಗೆ ಚರ್ಚೆ ಮಾಡ್ತಾನಾ? ಸೈನಿಕ ಫಿಲಂ ತೆಗೆದಿದ್ದು ನಾ ನೋಡಿಲ್ವಾ..? ಚನ್ನಪಟ್ಟಣದಲ್ಲೇ ಸಭೆ ಮಾಡೋಣ ಬರಲಿ. ಇವನು ಚಡ್ಡಿ ಹಾಕಿದ್ನೋ ಇಲ್ವೋ ಗೊತ್ತಿಲ್ಲ, ಆಗಿನಿಂದಲೂ ನನ್ನ ಚನ್ನಪಟ್ಟಣ ಸಂಬಂಧವಿದೆ. ಮೆಗಾ ಸಿಟಿ ಅಂಥ ಹೇಳಿ ಜನರಿಗೆ ವಂಚನೆ ಮಾಡಿದ್ದವ, ನನ್ನ ಬಗ್ಗೆ ಏಕವಚನದಲ್ಲಿ ಮಾತಾಡ್ತಾನಾ ಎಂದು ಕಿಡಿಕಾರಿದರು.
More Stories
ಅರಣ್ಯ ಪ್ರದೇಶದಲ್ಲಿ ಪಾರ್ಟಿ – ಪ್ರಶ್ನಿಸಿದ ಪೊಲೀಸರ ಮೇಲೆಯೇ ರೌಡಿಶೀಟರ್ಗಳ ಹಲ್ಲೆ
ರಾಮನಗರ: ಹಾಸ್ಟೆಲ್ನಲ್ಲೇ ನರ್ಸಿಂಗ್ ವಿದ್ಯಾರ್ಥಿನಿಯ ಆತ್ಮಹತ್ಯೆ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು