December 22, 2024

Newsnap Kannada

The World at your finger tips!

mahadevaiah

ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಹತ್ಯೆ?; ಸುಪಾರಿ ಕೊಲೆ ಶಂಕೆ

Spread the love
  • ನವೆಂಬರ್ 2ರಂದೇ ಮಹದೇವಯ್ಯ ಕೊಲೆಯಾಗಿರುವ ಶಂಕೆ
  • ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ ಪೊಲೀಸರಿಗೆ ಮಹತ್ವದ ಸುಳಿವು
  • ಸುಮಾರು 15 ನಿಮಿಷ ಕಾಡಿನಲ್ಲಿ ಓಡಾಡಿರುವ ಅಪಹರಣಕಾರರು


ಚಾಮರಾಜನಗರ: ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಅವರನ್ನು ಅಪಹರಿಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರು ಶಂಕೆ ವ್ಯಕ್ತವಾಗಿದೆ.

ಬೆಂಗಳೂರು, ರಾಮನಗರ , ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯನವರ ಶವವನ್ನು ಮೂಟೆಯಲ್ಲಿ ಕಟ್ಟಿ ಬೀಸಾಡಲಾಗಿದೆ .

ಈ ಕೃತ್ಯಕ್ಕೆ ಸಂಬಂಧಿಸಿದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ರಾಮಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ನವೆಂಬರ್ 2ರಂದೇ ಮಹದೇವಯ್ಯ ಅವರ ಕೊಲೆಯಾಗಿದೆ ಎನ್ನಲಾಗಿದೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸಿಸಿ ಕ್ಯಾಮೆರಾ ದೃಶ್ಯಗಳು ಪ್ರಬಲ ಸಾಕ್ಷ್ಯ ಒದಗಿಸಿವೆ .

ನವೆಂಬರ್ 2ರಂದು ಬೆಳಗ್ಗೆ 4.05ಕ್ಕೆ ಅಪರಿಚಿತರು ರಾಮಪುರಕ್ಕೆ ಪ್ರವೇಶ ಮಾಡಿ ಬೆಳಗಿನ ಜಾವ 4.20ಕ್ಕೆ ರಾಮಪುರದಿಂದ ಹೋಗಿದ್ದಾರೆ. ಸುಮಾರು 15 ನಿಮಿಷ ಕಾಡಿನ ದಾರಿಯಲ್ಲಿ ಓಡಾಡಿರುವ ಅಪಹರಣಕಾರರು, ಹನೂರು- ನಾಲ್ ರೋಡ್- ಈರೋಡ್ ರಸ್ತೆಯಲ್ಲಿ ಸಂಚಾರ ಮಾಡಿದ್ದಾರೆ. ವಾಪಸ್ ಹೋಗುವಾಗ ರಾಮಪುರದಲ್ಲಿ ಕಾರು ನಿಲ್ಲಿಸಿ ಪರಾರಿ ಆಗಿದ್ದಾರೆ.

ಮಹದೇವಯ್ಯ ಅವರನ್ನು ಬೇರೆ ಕಡೆ ಕೊಲೆ ಮಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ತಂದಿರುವ ಸಾಧ್ಯತೆ ಇದೆ. ಅಪರಿಚಿತರ ಚಲನವಲನದ ಆಧಾರದ ಮೇಲೆ ಪೊಲೀಸರು, ಅರಣ್ಯ ಇಲಾಖೆಯಿಂದ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿದ್ದಾರೆ

ಪೊಲೀಸರು ವಶಪಡಿಸಿಕೊಂಡಿರುವ ಸಿಸಿಟಿವಿ ದೃಶ್ಯದಲ್ಲಿ ಮೂವರು ಆರೋಪಿಗಳು ಸೆರೆಯಾಗಿದ್ದಾರೆ. ಚಾಮರಾಜನಗರದ ರಾಮಾಪುರ ಗ್ರಾಮದ ಬಳಿ ಮಹದೇವಯ್ಯನವರ ಕಾರು ಪತ್ತೆಯಾಗಿದೆ. ಮೂವರು ಅಪರಿಚಿತರು ಕೈಯಲ್ಲಿ ಟಾರ್ಚ್ ಹಿಡಿದು ನಡೆದು ಹೋಗುತ್ತಿದ್ದು, ಈ ಮೂವರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.ಮದಗಜದೊಂದಿಗೆ ಕಾಳಗ : ಮೈಸೂರು ದಸರಾ ಅಂಬಾರಿ ಆನೆ ಅರ್ಜುನ ಸಾವು

ಸಿಸಿಟಿವಿ ಕ್ಯಾಮರಾದ ವಿಡಿಯೋದಲ್ಲಿ ಓರ್ವ ಪಂಚೆಯಲ್ಲಿ, ಇನ್ನಿಬ್ಬರು ಪ್ಯಾಂಟ್ ಧರಿಸಿರೋ ವ್ಯಕ್ತಿಗಳು ಮೂವರು ನಡೆದು ಹೋಗುವ ದೃಶ್ಯ ಸೆರೆಯಾಗಿದೆ. ಇವರೇ ಕಿಡ್ನ್ಯಾಪ್ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

Copyright © All rights reserved Newsnap | Newsever by AF themes.
error: Content is protected !!