ರಾಜ್ಯದಲ್ಲಿ ಕೊರೊನಾ ಸೋಂಕು ‌ಸಂಖ್ಯೆ 17,489 ಕೇಸ್ – 80 ಬಲಿ

Team Newsnap
1 Min Read

– ಮಹಾಮಾರಿಗೆ 80 ಬಲಿ,

  • ಬೆಂಗಳೂರಿನಲ್ಲಿ 43 ಜನ ಸಾವು
  • ಬೆಂಗಳೂರಲ್ಲಿ 11,404, ಮೈಸೂರು 811, ತುಮಕೂರು 507 ಪ್ರಕರಣ

ಮಹಾಮಾರಿ ಕೊರೊನಾ ಮಿಂಚಿನಂತೆ ಹಬ್ಬುತ್ತದೆ. ರಾಜ್ಯದಲ್ಲಿ ಇಂದು ದಾಖಲೆಯ 17,489 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಮಹಾಮಾರಿಗೆ ಶನಿವಾರ 80 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿಯೇ 43 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು 11,404 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಎರಡೂವರೆ ಸಾವಿರ ಪ್ರಕರಣಗಳು ಹೆಚ್ಚಳವಾಗಿರುವುದು ತೀವ್ರ ಆತಂಕವಾಗಿದೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,19,160ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇಂದು 5,565 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಒಟ್ಟು 10,09,549 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ವರೆಗೆ ಒಟ್ಟು 13,270 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 589 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 13,099 ಆಂಟಿಜನ್ ಟೆಸ್ಟ್, 1,30,209 ಆರ್ ಟಿಪಿಸಿಆರ್ ಸೇರಿದಂತೆ ಒಟ್ಟು 1,43,308 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,18,728 ಮಂದಿಗೆ ಲಸಿಕೆ ನೀಡಲಾಗಿದೆ.

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ :

ಬಾಗಲಕೋಟೆ 50
ಬಳ್ಳಾರಿ 355
ಬೆಳಗಾವಿ 188
ಬೆಂಗಳೂರು ಗ್ರಾಮಾಂತರ 262 ಬೆಂಗಳೂರು ನಗರ 11,404
ಬೀದರ್ 359
ಚಾಮರಾಜನಗರ 136
ಚಿಕ್ಕಬಳ್ಳಾಪುರ 179
ಚಿಕ್ಕಮಗಳೂರು 68
ಚಿತ್ರದುರ್ಗ 80
ದಕ್ಷಿಣ ಕನ್ನಡ 309
ದಾವಣಗೆರೆ 122
ಧಾರವಾಡ 272
ಗದಗ 37
ಹಾಸನ 224
ಹಾವೇರಿ 48
ಕಲಬುರಗಿ 560
ಕೊಡಗು 50
ಕೋಲಾರ 144
ಕೊಪ್ಪಳ 121
ಮಂಡ್ಯ 223
ಮೈಸೂರು 811
ರಾಯಚೂರು 91
ರಾಮನಗರ 102
ಶಿವಮೊಗ್ಗ 125
ತುಮಕೂರು 507
ಉಡುಪಿ 118
ಉತ್ತರ ಕನ್ನಡ 102
ವಿಜಯಪುರ 281
ಯಾದಗಿರಿ 153

Share This Article
Leave a comment