ಮಂಡ್ಯ ಪೊಲೀಸ್ ಇಲಾಖೆಯು ಕರೊನಾ ಆಘಾತಕ್ಕೆ ಒಳಗಾಗಿದೆ. ಜಿಲ್ಲೆಯ ಎಸ್ಪಿ , ಎಎಸ್ಪಿ ಸೇರಿ
ಹಿರಿಯ ಅಧಿಕಾರಿಗಳಿಗೆ ಕೊರೋನಾ ಸೋಂಕು ದೃಡವಾಗಿದೆ.
ಆ ಅಧಿಕಾರಿಗಳೆಲ್ಲರೂ ಈಗ ಸ್ವತಃ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ.
ಎಸ್ಪಿ ಎನ್ ಯತೀಶ್ , ಎಎಸ್ಪಿ ಧನಂಜಯ ಹಾಗೂ, ಮಂಡ್ಯ ಡಿವೈಎಸ್ಪಿ ಮಂಜುನಾಥ್ , ಮಳವಳ್ಳಿ ಡಿವೈಎಸ್ಪಿ, ಮೂರು ಇನ್ಸ್ ಪೆಕ್ಟರ್ ಗೆ ಪಾಸಿಟಿವ್ ಟೆಸ್ಟ್ ಮಾಡಿಸಿಕೊಂಡಾಗ ಕರೊನಾ ದೃಢವಾಗಿದೆ.
ಪೊಲೀಸ್ ವಾರ್ಷಿಕ ಕ್ರೀಡಾಕೂಟ, ರಾಜ್ಯ ಯುವ ಜನೋತ್ಸವದಲ್ಲೂ ಭಾಗಿಯಾಗಿದ್ದ ಈ ಎಲ್ಲಾ ಅಧಿಕಾರಿಗಳ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.
ಇತ್ತೀಚೆಗೆ ಮಂಡ್ಯ ಡಿಎಆರ್ ಆವರಣದಲ್ಲಿ ನಡೆದಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ.
ಕ್ರೀಡಾಕೂಟದ ಬಳಿಕ ಯುವ ರಾಜ್ಯ ಮಟ್ಟದ ಜನೋತ್ಸವದ ಭದ್ರತೆಯಲ್ಲಿದ್ದ ಪೊಲೀಸರು.
ಹಿರಿಯ ಅಧಿಕಾರಿಗಳಿಗೆ ಕರೊನಾ ಸೋಂಕು ಧೃಡಪಟ್ಟ ಹಿನ್ನೆಲೆ ಮೈಸೂರು ಜಿಲ್ಲಾ ಎಎಸ್ಪಿಗೆ ಮಂಡ್ಯ ಆಡಳಿತದ ಹೊಣೆ ಹೊರಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳ ಮಾಹಿತಿ ಸಿಕ್ಕಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ