ಕೊರೊನಾ ಸೋಂಕಿತರ ಕುಟುಂಬಸ್ಥರಿಗೆ ಎಸ್ ಬಿ ಐ 5 ಲಕ್ಷ ರುಗಳ ವರೆಗೆ ವೈಯಕ್ತಿಕ ಸಾಲ ನೀಡುವುದಾಗಿ ಪ್ರಕಟಿಸಿದೆ.
ಎಸ್ಬಿಐ ಅಧ್ಯಕ್ಷ ದಿನೇಶ್ ಖರೆ ಅಡಮಾನ ಮುಕ್ತವಾದ 5 ಲಕ್ಷ ರು ಸಾಲವನ್ನು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಯಲ್ಲಿ ನೀಡಲಾಗುವುದು ಎಂದಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳು 5 ಲಕ್ಷ ರು ಭದ್ರತಾ ರಹಿತ ಸಾಲವನ್ನು ಸೋಂಕಿನಿಂದ ಸಂಕಷ್ಟಕ್ಕೊಳಗಾದವರಿಗೆ ನೀಡಲು ಮುಂದಾದ ನಂತರ ಎಸ್ಬಿಐ ಈ ನಿರ್ಧಾರ ಮಾಡಿದೆ.
ಸಂಬಳ ಪಡೆಯುವ, ಸಂಬಳ ಪಡೆಯದ ಮತ್ತು ಪೆನ್ಷನ್ ಪಡೆಯುತ್ತಿರುವವರು ಸಹ ಈ ಸಾಲವನ್ನು ಪಡೆಯಬಹುದಾಗಿದೆ. 25,000 ದಿಂದ 5 ಲಕ್ಚದವರೆಗೆ ಕೋವಿಡ್ 19 ಚಿಕಿತ್ಸೆಗಾಗಿ ಈ ಸಾಲ ಪಡೆಯಬಹುದಾಗಿದೆ. ಸಾಲ ಮರುಪಾವತಿ ಅವಧಿಯನ್ನು 5 ವರ್ಷಗಳ ಕಾಲ ನೀಡಲಾಗಿದೆ. ಈ ಸಾಲಕ್ಕೆ ವಾರ್ಷಿಕ 8.5% ಬಡ್ಡಿದರ ವಿಧಿಸಲಾಗುವುದು ಎಂದು ಹೇಳಿದೆ.
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ