ಕೋವಿಡ್ ಪರಿಹಾರದ ಹಣವನ್ನು ತಿರಸ್ಕರಿಸಿದ ರಾಜ್ಯದ 893 ಕುಟುಂಬಗಳು

Team Newsnap
1 Min Read

ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೀಡಿದ್ದ 50 ಸಾವಿರ ರೂ. ಪರಿಹಾರ ಹಣವನ್ನು ರಾಜ್ಯದ 893 ಕುಟುಂಬಗಳು ತಿರಸ್ಕರಿಸಿವೆ.

ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಕೊರೊನಾ ಪರಿಹಾರ ಧನವು ಕೇಂದ್ರ ಸರ್ಕಾರದಿಂದ ಘೋಷಣೆಯಾಗಿತ್ತು.

ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಒಂದು ಲಕ್ಷ ರು ಪರಿಹಾರ ಧನವನ್ನು ನೀಡಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 1.5 ಲಕ್ಷ ರೂ. ಪರಿಹಾರ ಧನವನ್ನು ಘೋಷಣೆ ಮಾಡಲಾಗಿತ್ತು.

ಸರ್ಕಾರ ಪರಿಹಾರ ಘೋಷಣೆ ಮಾಡಿದರೂ ಕುಟುಂಬಗಳ ಅವರ ಹೆಸರಿನಲ್ಲಿ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿವೆ.

ನಮಗೆ ಮೃತಪಟ್ಟವರ ಹೆಸರಿನಲ್ಲಿ ಸರ್ಕಾರದ ಹಣ ಬೇಡ. ಅದನ್ನು ಬಡವರಿಗೆ ನೀಡಿ ಎಂದು ಹೇಳಿವೆ.
ರಾಜಧಾನಿ ಬೆಂಗಳೂರು ಒಂದರಲ್ಲೇ 521 ಕುಟುಂಬಗಳು ಕೋವಿಡ್ ಪರಿಹಾರ ಧನವನ್ನು ನಿರಾಕರಿಸಿವೆ.

ಕೊರೊನಾದಿಂದ ರಾಜಧಾನಿಯಲ್ಲಿ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಸರ್ಕಾರದ ಅನುದಾನಗಳು ಸೂಕ್ತ ಸಮಯಕ್ಕೆ ಕೈ ಸೇರುವುದೇ ಕಷ್ಟವಾಗಿರುವ ಸಮಯದಲ್ಲಿ ಕುಟುಂಬಗಳು ಪರಿಹಾರ ಬೇಡ ಎಂದು ಹೇಳಿವೆ.

Share This Article
Leave a comment