January 11, 2025

Newsnap Kannada

The World at your finger tips!

muraga durga

ಮುರುಘಾ ಸ್ವಾಮಿ 9 ದಿನ ಮತ್ತೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

Spread the love

ಮುರುಘಾ ಸ್ವಾಮಿ ಪೊಲೀಸ್​ ಕಸ್ಟಡಿ ಅಂತ್ಯವಾದ, ಪೊಲೀಸರು ಸ್ವಾಮೀಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಜರು ಪಡಿಸಿದ್ದರು. ಕೋರ್ಟ್​ ಸದ್ಯ ಸ್ವಾಮೀಜಿಗಳನ್ನು ಮತ್ತೆ 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶವನ್ನು ನೀಡಿದೆ.

ಮುರುಘಾ ಸ್ವಾಮಿ ಮರಿ ಶಿಷ್ಯ, ಮೂರನೇ ಆರೋಪಿ ಬಸವಾದಿತ್ಯನ ಬಂಧನ

ಇದೇ ವೇಳೆ ಶ್ರೀಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.7 ಕ್ಕೆ ಮುಂದೂಡಲಾಗಿದೆ. ಸೆ.7ರ ಒಳಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸರ್ಕಾರಿ ಪರ ವಕೀಲರಿಗೆ ಸೂಚನೆ ನೀಡಲಾಗಿದೆ.

ಕೋರ್ಟ್​ಗೆ ಸ್ವಾಮೀಜಿ ಹಾಜರು ಪಡಿಸಿದ್ದ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಮನವಿ ಮಾಡಿದ್ದರು. ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ ಕಸ್ಟಡಿಗೆ ನೀಡೋದು ಬೇಡ, ಅವರನ್ನು ನ್ಯಾಯಾಂಗ ಬಂಧನ ನೀಡಲು ಕೋರ್ಟ್​ಗೆ ನೀಡಿದ್ದ ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಸೆ.14ರ ವರೆಗೂ ಮುರುಘಾ ಶ್ರೀಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!