ಬೆಂಗಳೂರಲ್ಲಿ ದಂಪತಿಗಳ ಹೈಡ್ರಾಮ : ಪೆಟ್ರೋಲ್‌ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ

Team Newsnap
1 Min Read

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಸಮಯದಲ್ಲಿ ಮನೆಗಳನ್ನು ಒಡೆಯದಂತೆ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ ಸಂದರ್ಭದಲ್ಲಿ ಅಧಿಕಾರಿಗಳೇ ದಂಪತಿಗಳ ಬೆದರಿಕೆಗೆ ಸುಸ್ತುಹೊಡೆದು ಹೋಗಿದ್ದಾರೆ.

ಕೆ.ಆರ್‌ ಪುರಂನ ಗಾಯತ್ರಿ ಲೇಔಟ್‌ನಲ್ಲಿ ಬಿಡಿಎ ಸೈಟ್‌ಗಳನ್ನು ದಂಪತಿಗಳಿಬ್ಬರು ಖರೀದಿಸಿದ್ದರು ಇದೀಗ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದೀರಿ ಎಂದು ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ . ಅದಕ್ಕಾಗಿ ಪೆಟ್ರೋಲ್‌ ಹಿಡಿದುಕೊಂಡು ಆತ್ಮಹತ್ಯೆ ಮಾಡುತ್ತೇವೆಂದು ದಂಪತಿಗಳಿಬ್ಬರು ರಾಜಕಾಲುವೆ ಮೇಲೆ ನಿಂತು ಬೆದರಿಕೆ ಹಾಕುತ್ತಿದ್ದಾರೆ.ಇದನ್ನು ಓದಿ –ಮಳವಳ್ಳಿ ಬಾಲಕಿ ದಿವ್ಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿ ಬಂಧನ

ಮನೆ ಒಡೆದು ಹಾಕಿದ್ದಲ್ಲಿ ಆತ್ಮಹತ್ಯೆ ಮಾಡುತ್ತೇವೆ. ಮುಖ್ಯಮಂತ್ರಿಗಳೇ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದಿದ್ದಾರೆ.

ನಿನ್ನೆ ನಮ್ಮ ಮನೆಯ ಕಾಪಾಂಡ್‌ ಹೊಡೆದು ಹಾಕಿದ್ದಾರೆ. ಇವತ್ತು ಮನೆ ಒಡೆದು ಹಾಕೋದಕ್ಕೆ ಮುಂದಾಗಿದ್ದಾರೆ. ನಾವು ಕಷ್ಟಪಟ್ಟು ಮನೆ ಕಟ್ಟಿದ್ದೇವೆ ಈಗ ಏಕಾಏಕಿ ಮನೆ ಒಡೆಯುತ್ತಿದ್ದಾರೆ ಅದಕ್ಕೆ ಬೇಸತ್ತು ನಿಮ್ಮ ಎದುರೇ ಆತ್ಮಹತ್ಯೆ ಮಾಡುತ್ತೇವೆಂದು ಪಟ್ಟು ಹಿಡಿದ್ದಾರೆ. 40 ಲಕ್ಷ ಹಣ ಸಾಲ ಮಾಡಿ ಕಟ್ಟಿದ್ದೇವೆ ಎಂದು ದಂಪತಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ವೇಳೆ ಘಟನಾ ಸ್ಥಳದಲ್ಲಿ ಪೊಲೀಸರು ಪೆಟ್ರೋಲ್‌ ಸುರಿದುಕೊಳ್ಳದಂತೆ ಮನವೋಲಿಸುತ್ತಿದ್ದಾರೆ.

Share This Article
Leave a comment