December 22, 2024

Newsnap Kannada

The World at your finger tips!

towers

ದೇಶದ ಅತಿ ಎತ್ತರದ ಅವಳಿ ಟವರ್ಸ್ ಧ್ವಂಸ – 9 ಸೆಕೆಂಡ್​​ಗಳಲ್ಲಿ ಧರೆಗೆ ಉರುಳಿದ ಕಟ್ಟಡ

Spread the love

ದೇಶದ ಅತಿ ಎತ್ತರದ ಅವಳಿ ಕಟ್ಟಡ ಇಂದು ಮ್ಯಾಹ್ನ 2.30 ಕ್ಕೆ ಧರೆಗುರುಳಿದೆ. 9 ಸೆಕೆಂಡ್ ಗಳಲ್ಲಿ ಅವಳಿ ಕಟ್ಟಡಗಳು ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

ಉತ್ತರಪ್ರದೇಶದ ನೋಯ್ಡಾದಲ್ಲಿ ತಲೆ ಎತ್ತಿದ್ದ ಸೂಪರ್‌ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಗೋಪುರಗಳನ್ನು ನೆಲಕ್ಕುರುಳಿಸಲಾಯಿತು, ಸುಪ್ರೀಂಕೋರ್ಟ್ ಆದೇಶದಂತೆ 40 ಅಂತಸ್ಥಿನ ಈ ಬೃಹತ್​ ಕಟ್ಟಡವನ್ನು ಉತ್ತರ ಪ್ರದೇಶದ ಯೋಗಿ ಸರ್ಕಾರ ಕೆಡವಿದೆ.

ಇಡೀ ಕಟ್ಟಡವನ್ನು ಕೆಡವಲು 9,640 ರಂಧ್ರಗಳನ್ನು ಮಾಡಲಾಗಿದೆ. ಇದರೊಂದಿಗೆ 3,700 ಕೆಜಿ ಗನ್ ಪೌಡರ್ ಬಳಕೆ ಮಾಡಲಾಗಿತ್ತು, ವಾಟರ್​ಫಾಲ್​ ತಂತ್ರಜ್ಞಾನ ಅಥವಾ ನೀರಿನ ಸ್ಫೋಟದ ಮಾದರಿಯನ್ನು ಕಟ್ಟಡಗಳನ್ನು ಡೆಮಾಲಿಷ್ ಮಾಡಲಾಗಿದೆ.

ಮೊದಲಿಗೆ ನೆಲಮಹಡಿ ಮೊದಲು ಸ್ಫೋಟಗೊಂಡಿದ್ದು, ಒಂದರ ಹಿಂದೆ ಮತ್ತೊಂದರಂತೆ ಸ್ಫೋಟವಾಯ್ತು. ವಾಟರ್​ಫಾಲ್ ಇಂಪ್ಲೋಷನ್ ತಂತ್ರಜ್ಞಾನದಿಂದ ಧ್ವಂಸಗೊಂಡ ಕಟ್ಟಡ ಒಳ ಭಾಗಕ್ಕೆ ಬಿದ್ದಿದ್ದು, ಸುತ್ತಮುತ್ತಲ ಪ್ರದೇಶ ದಟ್ಟ ಹೊಗೆಯಿಂದ ಆವೃತ್ತವಾಗಿತ್ತು. ಆ ಬಳಿಕ ದೂಳು ಹರಡುವುದನ್ನು ತಡೆಯಲು ನೀರಿನ್ನು ಸಿಂಪಡನೆ ಮಾಡಲಾಯ್ತು.

ಈ ಕಟ್ಟಡ ನಿರ್ಮಾಣಕ್ಕೆ ಆರಂಭದಿಂದಲೂ ವಿರೋಧ ಎದುರಾಗಿತ್ತು. ಯಾವುದೇ ಕಾರಣಕ್ಕೂ ಕಟ್ಟಡ ನಿರ್ಮಾಣವಾಗದಂತೆ ಪ್ರತಿಭಟನೆಗಳು ಕೂಡ ನಡೆದಿದ್ದವು. ವಿರೋಧದ ನಡುವೆಯೂ ಕಟ್ಟಡ ನಿರ್ಮಾಣವಾದ ಪರಿಣಾಮ 2014ರಲ್ಲಿ ಎಮರಾಲ್ಡ್ ಕೋರ್ಟ್ ಗ್ರೂಪ್ ಹೌಸಿಂಗ್ ಸೊಸೈಟಿಯ ನಿವಾಸಿಗಳ ಕಲ್ಯಾಣ ಸಂಘವು, ಟ್ವಿನ್ ಟವರ್​ಗಳ ನಿರ್ಮಾಣದ ಕುರಿತು ಸೂಪರ್‌ಟೆಕ್ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಡಿಜಿಟಿಲ್ ಮಿಡಿಯಾ ಕ್ಷೇತ್ರದಲ್ಲಿ ಭರವಸೆಯ ಎರಡು ಪೂರ್ಣ : ಮೂರನೇ ವರ್ಷಕ್ಕೆ ಕಾಲಿಟ್ಟ ‘ನ್ಯೂಸ್ ಸ್ನ್ಯಾಪ್

2010ರ ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯನ್ನು ಉಲ್ಲಂಘಿಸಿ ಅವಳಿ ಗೋಪುರಗಳನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿತ್ತು. ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅವಳಿ ಕಟ್ಟಡಗಳನ್ನು ಕೆಡವಲು 2014ರಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು.

ಈ ತೀರ್ಪಿನ ವಿರುದ್ಧ ಸೂಪರ್‌ಟೆಕ್ , ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿತ್ತು. ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಏಳು ವರ್ಷಗಳ ವಿಚಾರಣೆಯ ನಂತರ ಆಗಸ್ಟ್ 2021ರಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂಆರ್ ಶಾ ಅವರ ಪೀಠವು, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ಅದರಂತೆ ಅಕ್ರಮವಾಗಿ ನೆಲೆಗೊಂಡ ಕಟ್ಟಡಗಳನ್ನು ಧ್ವಂಸ ಮಾಡುವಂತೆ ಆದೇಶ ಹೊರಡಿಸಿತ್ತು. ಕೋರ್ಟ್​ ಆದೇಶದಂತೆ ಸದ್ಯ ಉತ್ತರ ಪ್ರದೇಶ ಸರ್ಕಾರ ಕಟ್ಟಡಗಳನ್ನು ಧ್ವಂಸ ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!