January 29, 2026

Newsnap Kannada

The World at your finger tips!

karona

ಚಿಕ್ಕಮಗಳೂರಿನ ವಸತಿ ಶಾಲೆಯಲ್ಲಿ ಮತ್ತೆ 30 ಮಂದಿಗೆ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ 70ಕ್ಕೆ ಏರಿಕೆ

Spread the love

ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸಿಗೋಡಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ
ಮತ್ತೆ ವಿದ್ಯಾರ್ಥಿಗಳು ಸೇರಿ 30 ಮಂದಿಗೆ ಸೋಂಕು ತಗುಲಿದೆ.

ಬಾಳೆಹೊನ್ನುರು ಸಮೀಪದ ಸಿಗೋಡು ಜವಾಹರಲಾಲ್ ನವೋದಯ ವಿದ್ಯಾಲಯದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ವಸತಿ ಶಾಲೆಯ ಸಿಬ್ಬಂದಿ ಸೇರಿ 443 ಜನರ ಸ್ವ್ಯಾಬ್ ಪಡೆಯಲಾಗಿತ್ತು.

ಇದರಲ್ಲಿ ಮತ್ತೆ 30 ಮಂದಿಗೆ ಸೋಂಕು ದೃಢಪಟ್ಟಿದ್ದು ಆತಂಕ ಸೃಷ್ಟಿಸಿದೆ. ಆದರೆ ಪತ್ತೆಯಾದ ಎಲ್ಲರಲ್ಲಿಯೂ ರೋಗ ಲಕ್ಷಣಗಳಿಲ್ಲ .

ಸದ್ಯ ಶಾಲೆಯನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ ಸೋಂಕಿತರನ್ನು ನವೋದಯ ವಿದ್ಯಾಲಯದಲ್ಲಿಯೇ ಕ್ವಾರಂಟೀನ್ ಮಾಡಲಾಗಿದೆ.

ಮೊದಲ ಹಂತದಲ್ಲಿ 40 ಮಂದಿಗೆ ಪಾಸಿಟೀವ್. ಬಂದಿತ್ತು. ಈಗ 30 ಮಂದಿ ಸೇರಿ ಒಟ್ಟು 70 ಮಂದಿಗೆ ಪಾಸಿಟೀವ್ ಬಂದಿದೆ

error: Content is protected !!