February 21, 2026

Newsnap Kannada

The World at your finger tips!

kodagu child

ಮಡಿಕೇರಿ ನವೋದಯ ವಸತಿ ಶಾಲೆಯ 21 ಮಕ್ಕಳಿಗೆ ಕೊರೋನಾ ಪಾಸಿಟಿವ್ : ಆತಂಕ ಶುರು

Spread the love

ಮಡಿಕೇರಿಯ ಗಾಳಿಬೀಡು ಸಮೀಪದ ನವೋದಯ ವಸತಿ ಶಾಲೆಯಲ್ಲಿ 21 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.

ಕೊರೊನಾ ಪಾಸಿಟಿವ್ ಬಂದ 21 ಮಕ್ಕಳನ್ನು ಮಡಿಕೇರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತದೆ.

270 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 21 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ನಾಳೆ ಶಾಲೆಯ ಸಿಬ್ಬಂದಿ ಮತ್ತು ಉಳಿದ ಮಕ್ಕಳಿಗೆ ಟೆಸ್ಟ್ ಮಾಡಲಾಗುತ್ತದಂತೆ.

ಕಳೆದೊಂದು ವಾರದಿಂದ ಮಕ್ಕಳಲ್ಲಿ ಕೆಮ್ಮು ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕೋವಿಡ್ ಲಕ್ಷಣವಿದ್ದ 139 ಮಕ್ಕಳಿಗೆ ಟೆಸ್ಟ್ ಮಾಡಲಾಗಿತ್ತು.

error: Content is protected !!