ಇದುವರೆಗೂ ಭಾರತದಲ್ಲಿ ಕರೋನಾ ರಣಕೇಕೆಗೆ ಬಲಿಯಾದ ವೈದ್ಯರ ಸಂಖ್ಯೆ ೩೮೨. ಇವರ ನಿಸ್ವಾರ್ಥ ತ್ಯಾಗವನ್ನು ಸರ್ಕಾರವು ಕಡೆಗಣಿಸಿದೆ ಎಂದು ಐಎಂಎ (ಭಾರತೀಯ ವೈದ್ಯಕೀಯ ಸಂಘ) ಆರೋಪ ಮಾಡಿದೆ.
ಸಂಸತ್ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಾಗಲೀ ಅಥವಾ ಇನ್ಯಾವುದೇ ಸಚಿವರಾಗಲಿ ಕರೋನಾದ ವಿರುದ್ಧ ಹೋರಾಡಿದ ವೈದ್ಯರನ್ನು ಹೆಸರಿಸದಿರುವುದರಿಂದ ಐಎಂಎ ಆಕ್ರೋಶಗೊಂಡಿದೆ.
‘ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದರಿಂದ ನಮ್ಮ ಬಳಿ ಯಾವುದೇ ಪರಿಹಾರ ದಾಖಲೆಗಳಿಲ್ಲ’ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಹೇಳಿದ್ದರು.
ಆದರೆ ರಾಜ್ಯ ಸರ್ಕಾರಗಳು ಮಾಡಿಸಿರುವ ವಿಮೆ ಕೊರೋನಾದಿಂದ ಮೃತಪಟ್ಟ ಯಾವುದೇ ವೈದ್ಯರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಐಎಂಎ ಹೇಳಿದೆ.
ಸರ್ಕಾರವು ವೈದ್ಯರ ತ್ಯಾಗ, ನಿಸ್ವಾರ್ಥ ಸೇವೆ ಕಡೆಗಣಿಸಿದೆ ಸಾಂಕ್ರಾಮಿಕ ಕಾಯ್ದೆ ೧೮೯೭ ಮತ್ತು ವಿಪತ್ತು ನಿರ್ವಹಣೆ ಕಾಯ್ದೆಯ ನಿರ್ವಹಣೆ ಮಾಡಲು ಸರ್ಕಾರ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಆರೋಪಿಸಿದೆ.
ಸರ್ಕಾರವು ಕೋವಿಡ್ ಸಂದರ್ಭದಲ್ಲೂ ನಿರ್ವಹಿಸಿರುವ ವೈದ್ಯರನ್ನು ಶ್ಲಾಘನೆ ಮಾಡಿದ್ದರೂ, ಖಾಯಿಲೆಯಿಂದ ಮೃತಪಟ್ಟವರನ್ನು ಉಲ್ಲೇಖ ಮಾಡಿರಲೇ ಇಲ್ಲ.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ