2021ರ ಜುಲೈಗೆ ಕೋವಿಡ್ ಲಸಿಕೆ ನಿರೀಕ್ಷೆ

Team Newsnap
1 Min Read
credits - google

‘2021ರ ಜುಲೈ ವೇಳೆಗೆ ಕೋವಿಡ್ ಲಸಿಕೆ ದೊರಕಬಹುದು. ಈ ಲಸಿಕೆಯನ್ನು ಸುಮಾರು 25 ಕೋಟಿ ಜನರಿಗೆ ನೀಡಬಹುದು’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಕೊರೋನಾ ಹಾವಳಿಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಜನ ಜೀವನ-ಆರ್ಥಿಕ‌ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಮೊದಲು ಇದೇ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಲಸಿಕೆ ಬರುತ್ತದೆ ಎಂದು ಹೇಳಲಾಗಿತ್ತು. ಈಗ 2021ರ ಜುಲೈ ಎಂದು ಹೇಳಲಾಗುತ್ತಿದೆ.

400 ರಿಂದ 500 ಮಿಲಿಯನ್ ಲಸಿಕೆಗಳನ್ನು ವಿತರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ದೇಶದ ಜನರಿಗೆ ಅಉಮಾರು 500 ಡೋಸ್ ಕರೋನಾ ಲಸಿಕೆ‌ ಬೇಕಾಗಬಹುದು. ಲಸಿಕೆ ತಯಾರಿ ಪೂರ್ಣವಾದ ನಂತರ ಎಲ್ಲ‌ಜನರಿಗೂ ನ್ಯಾಯ ಸಮ್ಮತ‌ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ‌ ಕೆಲಸ ಮಾಡಲಾಗುತ್ತಿದೆ‌. ದೇಶದ ಪ್ರತಿಯೊಬ್ಬರಿಗೂ ಕರೋನಾ ಲಸಿಕೆ ನಿಡುವುದು ನಮ್ಮ ಆದ್ಯತೆ’ ಎಂದು‌‌ ಸಚಿವರು ಹೆಳಿದರು.

TAGGED: ,
Share This Article
Leave a comment