December 22, 2024

Newsnap Kannada

The World at your finger tips!

ipl 2022

IPL 2022: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಿಚಲ್ ಮಾರ್ಷಗೆ ಕೊರೊನಾ ದೃಢ – ಬುಧವಾರ ಪಂದ್ಯ ಡೌಟ್ ?

Spread the love

ಐಪಿಎಲ್​ (IPL) 15 ನೇ ಆವೃತ್ತಿಯ ಮೇಲೂ ಕೊರೊನಾ ಕರಿಛಾಯೆ ಆವರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಫಿಜಿಯೋ ಪ್ಯಾಟ್ರಿಕ್ ಫಾರ್ಹಾರ್ಟ್​ ನಂತರ, ತಂಡದ ಆಲ್​ರೌಂಡರ್​ ಮಿಚೆಲ್ ಮಾರ್ಷ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಡೀ ಡೆಲ್ಲಿ ತಂಡ ಕ್ವಾರಂಟೀನ್ ಒಳಗಾಗಿದೆ 48 ಗಂಟೆಗಳ ಅವಧಿಯಲ್ಲಿ ಪ್ರತಿಯೊಬ್ಬರ ಕೋವಿಡ್​ ಟೆಸ್ಟ್​ ನಡೆಯಲಿದೆ. ಹೀಗಾಗಿ ಫಲಿತಾಂಶ ಬಂದ ಬಳಿಕವೇ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

ಮಾರ್ಷ್​ ಕೊರೊನಾ RT-PCR​​ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.

ಮಾರ್ಷ್​ ಜೊತೆಗೆ ತಂಡದ ಇನ್ನು ಮೂವರು ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢವಾಗಿದೆ ಅವರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಇದರಿಂದ ಬುಧವಾರ ನಡೆಯಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್​​​ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯ ಮುಂದೂಡುವ ಸಾಧ್ಯತೆ ಇದೆ.

Copyright © All rights reserved Newsnap | Newsever by AF themes.
error: Content is protected !!