ಕರೋನಾ ಮರಣ ಪ್ರಮಾಣ ಶೇ.1ಕ್ಕಿಂತ ಕೆಳಗಿಳಿಸುವ ಗುರಿ – ಸಚಿವ ಡಾ.ಕೆ. ಸುಧಾಕರ್

Team Newsnap
1 Min Read
sudhakar picture

ನ್ಯೂಸ್ ಸ್ನ್ಯಾಪ್

ಬೆಂಗಳೂರು

ಪ್ರಸ್ತುತ ರಾಜ್ಯದಲ್ಲಿ ಕರೋನಾ ಮರಣ ಪ್ರಮಾಣ ಶೇ. 1.62 ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ.1 ಕ್ಕಿಂತ ಕೆಳಗಿಳಿಸುವ ಗುರಿ ಸರ್ಕಾರದ್ದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಗುರುವಾರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳ ಭವಿಷ್ಯ ರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಕೇವಲ ಪಠ್ಯ ದಲ್ಲಿನ ಶಿಕ್ಷಣ ಕೊಡುವದಲ್ಲದೇ ಅದಕ್ಕೂ ಮೀರಿದ ಸಾಮಾಜಿಕ ಶಿಕ್ಷಣವನ್ನು ನೀಡಿ, ಸಮಾಜಕ್ಕೆ ಒಳ್ಳೆಯ ಜವಾಬ್ದಾರಿಯುತ ಪ್ರಜೆಗಳನ್ನು ನೀಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

ಕರೊನಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸುಧಾರಿಸಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಿದ್ದೀರಿ. ನಿಮ್ಮ ಹಾಗೂ ನಿಮ್ಮಂಥಹ ಅನೇಕ ವೈದ್ಯರು ಮತ್ತು ವಿದ್ಯಾರ್ಥಿಗಳಿಂದ ಕರೋನಾ ಮರಣ ಪ್ರಮಾಣ ಶೇ.1.62 ರಷ್ಟಿದ್ದು, ಇನ್ನು ಕಲ ದಿನಗಳಲ್ಲಿ ಇದನ್ನು ಶೇ. 1 ಕ್ಕಿಂತ ಕೆಳಗಿಸುವ ಗುರಿ ಹೊಂದಿದ್ದೇವೆ ಎಂದರು.

‘ವೈದ್ಯಕೀಯ ಶಿಕ್ಷಣ ಇಲಾಖೆಯು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತದೆ. ಇದು ಬಹುದಿನದ ಬೇಡಿಕೆಯಾಗಿತ್ತು. ಅಲ್ಲದೇ ನಮ್ಮ ಸರ್ಕಾರವು ಶಿಷ್ಯವೇತನವನ್ನು ಶೇ.40ರಷ್ಟು ಹೆಚ್ಚಳ ಮಾಡಿದೆ’ ಎಂದರು.

Share This Article
Leave a comment