November 23, 2024

Newsnap Kannada

The World at your finger tips!

karnataka budget 2022

ನೀರಾವರಿಗೆ ಬೊಮ್ಮಾಯಿ ಶಕ್ತಿ : ಕೃಷ್ಣಾ, ಮೇಕೆದಾಟು, ಎತ್ತಿನಹೊಳೆ, ಮಹಾದಾಯಿಗೆ ಕೋಟಿ ಕೋಟಿ ರು ಅನುದಾನ

Spread the love

ರಾಜ್ಯ ನೀರಾವರಿ ಯೋಜನೆಗಳ ಕುರಿತು ಮಹತ್ವ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಬಜೆಟ್​ನಲ್ಲಿ ನೀರಾವರಿಗೆ ಬಂಪರ್​ ಹಣವನ್ನು ನೀಡಿದ್ದಾರೆ.

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೋಟಿ ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿ ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ ಎಂಬುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ

ಕೃಷ್ಣಾ, ಕಾವೇರಿ, ಮಹದಾಯಿ, ಗೋದಾವರಿ, ಭದ್ರಾ ಮೇಲ್ದಂಡೆ ಜಲಾನಯನ ಪ್ರದೇಶಗಳು, ಪಾಲಾರ್ ಮತ್ತು ಪೆನ್ನಾರ್ ಉಪ ಜಲಾನಯನ ಪ್ರದೇಶಗಳು, ಎತ್ತಿನಹೊಳೆ ಯೋಜನೆ ಮತ್ತು ನದಿಗಳ ಜೋಡಣೆಯಲ್ಲಿ ಸರ್ಕಾರದ ಆದ್ಯತೆಯಿಂದ ಕ್ರಮಕೈಗೊಳ್ಳುತ್ತದೆ ಎಂಬ ಭರವಸೆಯನ್ನು ಬಜೆಟ್​ ಮೂಲಕ ತಿಳಿಸಿದ್ದಾರೆ.

1) ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಕ್ರಿಯಾ ಯೋಜನೆ

2) ಭದ್ರಾ ಮೇಲ್ದಂಡೆ ಯೋಜನೆಗೆ 3,000 ಕೋಟಿ ರು ಅನುದಾನ

3) ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 1000 ಕೋಟಿ ರು ಅನುದಾನ

4) ಮೇಕದಾಟು ಯೋಜನೆ 3,000 ಕೋಟಿ ರು ಅನುದಾನ

5) ತುಂಗಭದ್ರಾ ಜಲಾಶಯ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಸಾವಿರ ಕೋಟಿ ರು ಅನುದಾನ

6) ಕೇಂದ್ರ ಸರ್ಕಾರದ PMKSY_AIBP ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದೆಂಡೆ ಯೋಜನೆ ಹಂತ-1 ಮತ್ತು 2ರಲ್ಲಿ ಬೂದಿಹಾಳ ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ)ಕಾಲುವೆ ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಕ್ರಮ.

7) ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್​ಲ್ಯಾಂಡ್​​ ಯೋಜನೆ ಅನುಷ್ಠಾನ.

8) ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, 35,319 ಹೆಕ್ಟೇರ್​​ ಪ್ರದೇಶಕ್ಕೆ ನೀರಾವರಿ ಸೌಲಭ್ಯ.

9) ಕಾಳಿ ನದಿ ನೀರು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ.

10) ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಕ್ರಿಯಾ ಯೋಜನೆ.. ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂಪಾಯಿ.

Copyright © All rights reserved Newsnap | Newsever by AF themes.
error: Content is protected !!