ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನುವ ನಂಬಿಕೆ ಡಿ.ಕೆ.ಶಿವಕುಮಾರ್‌ಗೆ ಯಾಕಿದೆ? ಕಾಂಗ್ರೆಸ್ಸಿನ ಸಮೀಕ್ಷೆ ತಗೊಂಡು ಡಿಕೆಶಿ ಚಿನ್ನದ ತಗಡು ಹೊಡೆಸಿಕೊಂಡು ಮನೆ, ಕಚೇರಿಯಲ್ಲಿ ಹಾಕೊಳ್ಳಲಿ. ಅವರು ಈ ಬಾರಿಗೆ ಗೆಲ್ಲುತ್ತದೆ. 50 ರಿಂದ 70 ಸೀಟ್. ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‍ಡಿಕೆ, ಜೆಡಿಎಸ್‍ನ ಸಾಮರ್ಥ್ಯ ಹಳೆ ಮೈಸೂರು ಭಾಗದಲ್ಲಿ ಮಾತ್ರ. ನಮ್ಮ ಪೈಪೋಟಿ ಬಿಜೆಪಿ ಜೊತೆ ಮಾತ್ರ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.ಹಾಸನ : ವಿದ್ಯಾರ್ಥಿಗಳ ನಡುವೆ ಮಾರಾಮಾರಿ – ಲಾಠಿ ಬೀಸಿ ನಿಯಂತ್ರಿಸಿದ ಪೊಲೀಸರು
ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗೆ ಇದೆ ಎನ್ನುವುದು ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ ಅದು ಚುನಾವಣೆ ಗೆಲ್ಲುವುದಕ್ಕೆ ಅಲ್ಲ. ಅಧಿಕಾರಕ್ಕೇ ಬಂದರೂ ಎಷ್ಟು ಪರ್ಸಂಟೇಜ್ ಪಡೆಯಬೇಕು
ಅನ್ನುವ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ ಒಂದು ಬಾರಿ 38, ಮತ್ತೊಮ್ಮೆ 62, ಇನ್ನೊಮ್ಮೆ 78 ಸ್ಥಾನ ಪಡೆದಿದೆ ಅಷ್ಟೇ. ಈ ಬಾರಿ ಕಾಂಗ್ರೆಸ್ ಅವರಿಗೆ ಗೆಲ್ಲುವ ಶಕ್ತಿ ಇರೋದು 50-70 ಸೀಟ್ ಅಷ್ಟೇ. ಸಂಪೂರ್ಣ ಬಹುಮತ ಬರುತ್ತೆ ಎನ್ನುವ ಕಾಂಗ್ರೆಸ್ಸಿಗರು, ಜೆಡಿಎಸ್‍ನ ಹಲವರ ಮನೆ ಕಾಯುತ್ತಿದ್ದಾರೆ.
ಇವತ್ತು ನಾನು ಹೇಳ್ತಿದ್ದೀನಿ ಬರೆದಿಟ್ಟುಕೊಳ್ಳಿ. ರಾಜ್ಯದಲ್ಲಿ ಜನತಾದಳದ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೆ. ನಮ್ಮ ಸರ್ಕಾರ ಬರೋದನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಡೆಯುವುದಕ್ಕೆ ಆಗಲ್ಲ. ಮತ್ತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
- ಜುಲೈ ವೇಳೆಗೆ ಧಾರವಾಡ – ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭ – ಜೋಶಿ
- ನಮ್ಮ ಮೆಟ್ರೋ ಲಿಖಿತ ಪರೀಕ್ಷೆ ಮುಂದೂಡಿಕೆ
- ನನ್ನ ವಿರುದ್ಧದ ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುವೆ : ಬ್ರಿಜ್ ಭೂಷಣ್
- ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಚರ್ಚೆ ಇಲ್ಲ : ಜಗದೀಶ್ ಶೆಟ್ಟರ್
- ಲೋಕಾಯುಕ್ತ ದಾಳಿ- ಜಿಂಕೆ ಕೊಂಬು ಸೇರಿ 4.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
- ಜೆಡಿಎಸ್ ವಿಸರ್ಜನೆ ಪ್ರಶ್ನೆಗೆ ಎಚ್ಡಿಕೆ ಕಡಕ್ ಉತ್ತರ
More Stories
ಜುಲೈ ವೇಳೆಗೆ ಧಾರವಾಡ – ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭ – ಜೋಶಿ
ನಮ್ಮ ಮೆಟ್ರೋ ಲಿಖಿತ ಪರೀಕ್ಷೆ ಮುಂದೂಡಿಕೆ
ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಚರ್ಚೆ ಇಲ್ಲ : ಜಗದೀಶ್ ಶೆಟ್ಟರ್