December 23, 2024

Newsnap Kannada

The World at your finger tips!

Politics , JDS , Congress

Joining Congress to provide accommodation for those who believe: YSV Datta ನಂಬಿದವರಿಗೆ ನೆಲೆ ಕಲ್ಪಿಸಲು ಕಾಂಗ್ರೆಸ್‌ಗೆ ಸೇರ್ಪಡೆ : ವೈಎಸ್‌ವಿ ದತ್ತ

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ : ವೈವಿಎಸ್ ದತ್ತ ಘೋಷಣೆ

Spread the love

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಶಾಸಕ ವೈಎಸ್ ವಿ ದತ್ತಾಗೆ ಕಡೂರು ಕ್ಷೇತ್ರದ ಕೈ ಟಿಕೆಟ್ ತಪ್ಪಿತ್ತು. ಈ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ಸ್ವಾಭಿಮಾನದ ರಣಕಹಳೆ ಊದಿದ್ದಾರೆ.

ಇಂದು ಮಾಜಿ ಶಾಸಕ ವೈಎಸ್ ವಿ ದತ್ತಾ ಅವರು, ಕಡೂರಿನಲ್ಲಿ ಸ್ವಾಭಿಮಾನಿ ಸಮಾವೇಶವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ವೈಎಸ್ ವಿ ದತ್ತಾ ಅಭಿಮಾನಿಗಳು ಪಾಲ್ಗೊಂಡಿದ್ದರು.

ಅಭಿಮಾನಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ, ಕಡೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.

ನಾನು ಕಡೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದರು. ಅಲ್ಲದೇ ಚುನಾವಣಾ ಖರ್ಚಿಗಾಗಿ ಟವಲ್ ಹಾಕಿ ಸಮಾವೇಶದಲ್ಲೇ ಹಣ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಡೂರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು ಮುಗಿದು ಹೋದ ಕತೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಹಣ, ಜಾತಿ ಬಲದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ನನಗೆ ಜಾತಿ ಬಲವೂ ಇಲ್ಲ, ಹಣ ಬಲವು ಇಲ್ಲ. ಮೈತುಂಬಾ ಸಾಲ ಮಾಡಿಕೊಂಡಿದ್ದೇನೆ. ನನಗೆ ಯಾಕೆ ಟಿಕೆಟ್ ಕೊಡುತ್ತಾರೆ ಎಂಬುದಾಗಿ ಹೇಳುವ ಮೂಲಕ ಭಾವುಕರಾದರು.

Copyright © All rights reserved Newsnap | Newsever by AF themes.
error: Content is protected !!