May 29, 2022

Newsnap Kannada

The World at your finger tips!

rahul gandhi

ರಾಹುಲ್‌ ಮದುವೆಗೆ ಹೋದರೂ ಈ ಸಂಘಿಗಳಿಗೆ ಯಾಕೆ ಭಯ: ಕಾಂಗ್ರೆಸ್‌ ಪ್ರಶ್ನೆ

Spread the love

ರಾಹುಲ್‌ ಗಾಂಧಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರೆ ಈ ಸಂಘಿಗಳಿಗೆ ಯಾಕೆ ಭಯ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯ ವ್ಯಕ್ತಿಯಂತೆ ಖಾಸಗಿ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿದರೆ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಘಿಗಳು ಏಕೆ ಸುಳ್ಳನ್ನು ಹಬ್ಬಿಸುತ್ತಿದ್ದಾರೆ? ನಾವೆಲ್ಲರೂ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ ಎಂದು ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ನೈಟ್‌ ಕ್ಲಬ್‌ನಲ್ಲಿರುವ ವೀಡಿಯೋ ವೈರಲ್‌ ಆಗುತ್ತಿದ್ದು ಬಿಜೆಪಿ ನಾಯಕರ ಟೀಕೆಗೆ ಕಾಂಗ್ರೆಸ್‌ ವಕ್ತಾರ ರಂದೀಪ್‌ ಸುರ್ಜೇವಾಲಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ರಾಹುಲ್‌ ಗಾಂಧಿ ವೈಯಕ್ತಿಕ ಕಾರ್ಯಕ್ರಮದಲ್ಲಿ ಇದ್ದಾರೆ ಬಿಜೆಪಿಯವರು ವಿದ್ಯುತ್‌ ಸಮಸ್ಯೆ, ಹಣದುಬ್ಬರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಆದರೆ ರಾಹುಲ್‌ ಗಾಂಧಿ ಅವರ ಬಗ್ಗೆ ಮಾತನಾಡಲು ಮಾತ್ರ ಇವರಿಗೆ ಸಮಯವಿದೆ ಎಂದು ಕಿಡಿಕಾರಿದರು.

ಮಾಣಿಕ್ಕಂ ಟ್ಯಾಗೋರ್ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಾರ್ಯಕ್ರಮವೊಂದರಲ್ಲಿ ಶಾಂಪೇನ್ ಚಿಮ್ಮಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ.

error: Content is protected !!