December 26, 2024

Newsnap Kannada

The World at your finger tips!

BJP , JDS , Congress

BJP Dhulipata: JDS a fallen petal lಬಿಜೆಪಿ ಧೂಳಿಪಟ: ಎಲೆಯಂತೆ ಉದುರಿದ ದಳ

ಕಾಂಗ್ರೆಸ್ – ಜೆಡಿಎಸ್ ಭ್ರಷ್ಟಾಚಾರದ ಪಕ್ಷ : ಮಂಡ್ಯದಲ್ಲಿ ಅಮಿತ್ ಶಾ ಗುಡುಗು

Spread the love

ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಮಾಡುವ ಪಕ್ಷ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಗುಡುಗಿದ್ದಾರೆ.

ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಮಾತನಾಡಿ ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು ಯೋಚಿಸುತ್ತೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.ಗೆಜ್ಜಲಗೆರೆಯ ಮನ್ಮುಲ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಮೆಗಾ ಡೈರಿ ಉದ್ಘಾಟನೆ

ನಮ್ಮದು ಡಬಲ್ ಎಂಜಿನ್ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಲಿದೆ. 2018 ರಲ್ಲಿ ಮಂಡ್ಯದಿಂದಲೇ ನಾವು ಪ್ರಚಾರ ಮಾಡಿದ್ವಿ. . 2019 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಎರಡು ಪಕ್ಷದಲ್ಲಿ ಹಲವರು ಕ್ರಿಮಿನಲ್ ಗಳಿದ್ದಾರೆ. ಎರಡು ಪಕ್ಷಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿಗೆ ಎಟಿಮ್ ಆಗುತ್ತದೆ. ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು ಯೋಚಿಸುತ್ತೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.

ರಾಮನಾಥ್ ಕೋವಿಂದ್, ಹಾಗೂ ದ್ರೌಪದಿ ಮುರ್ಮು , ಇಬ್ಬರು ದಲಿತರನ್ನು ರಾಷ್ಟ್ರಪತಿಗಳಾಗಿ ಮಾಡಿದೆವು. ಕಿಸಾನ್ ಸಮ್ಮಾನ್ ನಿಂದ ಜನರಿಗೆ 6000 ರೂ ಹಣ ನೀಡಿದೆವು. ಬಿಜೆಪಿ ಬಡವರಿಗಾಗಿ ಹಲವು ಜನಪರ ಯೋಜನೆಗಳನ್ನು ತಂದಿದೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!