February 22, 2026

Newsnap Kannada

The World at your finger tips!

krishna abi

ಮೈಸೂರು ದಸರಾ ಉದ್ಘಾಟಕ ಎಸ್.ಎಂ.ಕೃಷ್ಣಗೆ ಮಂಡ್ಯದಲ್ಲಿ ಅಭಿನಂದನೆ

Spread the love

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಮಾಡಲು ನಿಯೋಜಿತರಾಗಿರುವ ಮಂಡ್ಯ ಜಿಲ್ಲೆಯ ಹಿರಿಯ ನಾಯಕ , ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಂಡ್ಯ ನಗರದ ಜೆ.ಸಿ.ವೃತ್ತದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ, ಮಂಡ್ಯ ನಾಗರೀಕರ ವತಿಯಿಂದ ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಎಸ್.ಎಂ.ಕೃಷ್ಣ ಅವರಿಗೆ ಸಾವಯವ ಬೆಲ್ಲ ನೀಡಿ ಅಭಿನಂದಿಸಿದರು.

ನಂತರ ವೇದಿಕೆಯ ಮೇಲೆ ಬ್ಯಾನರ್ ನಲ್ಲಿ ವಿವಿಧ ಮುಖಂಡರುಗಳ ಜೊತೆ ಎಸ್.ಎಂ.ಕೃಷ್ಣಅವರು ಇರುವ ಭಾವಚಿತ್ರವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್,ಬೇಕರಿ ಅರವಿಂದ್,ಚಾಮಲಾಪುರ ಮಹಾದೇವು, ಹಳುವಾಡಿ ನಾಗರಾಜು, ಹೊಸಹಳ್ಳಿ ಶಿವಲಿಂಗೇಗೌಡ,ಹನಿಯಂಬಾಡಿ ಸತೀಶ್, ಕೆ.ಸಿ.ಪ್ರಶಾಂತ್ ಬಾಬು, ಬಿಳಿದೇಗಲು ಬೋರೇಗೌಡ ಸೇರಿದಂತೆ ಇತರರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಅಭಿನಂದಿಸಿದರು.

error: Content is protected !!