ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಆದೇಶ ನೀಡಿದ್ದಾರೆ.
ಹಾಸನದ ಬಿಎಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಜನವರಿ 20ರ ಮಧ್ಯರಾತ್ರಿ ಅಪರಿಚಿತರು ರೈಲ್ವೆ ನೌಕರರೊಬ್ಬರಿಂದ 10 ಸಾವಿರ ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದರು.
ಈ ಸಂಬಂಧ ಹಾಸನ ನಗರ ಠಾಣೆಗೆ ದೂರು ನೀಡಲು ರೈಲ್ವೆ ನೌಕರ ಶಾಂತಿಭೂಷಣ್ ತೆರಳಿದ್ದರು. ಆದರೆ ದೂರು ಸ್ವೀಕರಿಸದೆ ಬಡಾವಣೆ ಠಾಣೆಗೆ ಹೋಗಿ ಎಂದು ಸೆಂಟ್ರಿ ಹಾಗೂ ಎಸ್ಎಚ್ಒ ಕಳುಹಿಸಿದ್ದರು.
ನಂತರ ಬಡಾವಣೆ ಠಾಣೆಗೆ ದೂರು ನೀಡಲು ಹೋದರು. ಅಲ್ಲಿನ ಸೆಂಟ್ರಿ ಹಾಗು ಎಸ್ಎಚ್ಒ ಸಹ ದೂರು ಸ್ವೀಕರಿಸಿರಲಿಲ್ಲ.
ಈ ಬಗ್ಗೆ ರೈಲ್ವೆ ನೌಕರ ಶಾಂತಿಭೂಷಣ್ ಎಸ್ಪಿಗೆ ದೂರು ನೀಡಿದರು. ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ ಎರಡೂ ಠಾಣೆಯ ಇಬ್ಬರು ಸೆಂಟ್ರಿ ಹಾಗೂ ಇಬ್ಬರು ಎಸ್ಎಚ್ಒ ರನ್ನು ಅಮಾನತುಗೊಳಿಸಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ