December 22, 2024

Newsnap Kannada

The World at your finger tips!

Dog , Case , Andra Pradesh

Complaint against the dog that tore the CM poster of Andhra! ಆಂಧ್ರದ ಸಿಎಂ ಪೋಸ್ಟರ್ ಹರಿದ ನಾಯಿ ವಿರುದ್ಧ ದೂರು!

ಆಂಧ್ರದ ಸಿಎಂ ಪೋಸ್ಟರ್ ಹರಿದ ನಾಯಿ ವಿರುದ್ಧ ದೂರು!

Spread the love

ವಿಜಯವಾಡ:ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿದ ನಾಯಿಯ ವಿರುದ್ಧ ತೆಲುಗು ದೇಶಂ ಪಕ್ಷದ(ಟಿಡಿಪಿ) ನಾಯಕಿಯೊಬ್ಬರು ದೂರು ದಾಖಲಿಸಿದ್ದಾರೆ.

ಈ ವಿಚಿತ್ರ ಘಟನೆ ವಿಜಯವಾಡದಲ್ಲಿ ನಡೆದಿದೆ. ನಾಯಿಯ ವಿರುದ್ಧ ಪಾಯಕರಾವ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಟಿಡಿಪಿ ನಾಯಕಿ ದಾಸರಿ ಉದಯ ಶ್ರೀ, ಮಹಾನ್ ವ್ಯಕ್ತಿಯನ್ನು ಅವಮಾನಿಸಿರುವ ನಾಯಿ ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ.

ಈ ಕೃತ್ಯದ ಹಿಂದಿರುವ ನಿಜವಾದ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರನ್ನು ಅಪಹಾಸ್ಯ ಮಾಡಲು ಟಿಡಿಪಿ ನಾಯಕಿ ಈ ದೂರು ನೀಡಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ನಾಯಿಯೊಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿಯುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.ಇದನ್ನು ಓದಿ –ಜೆಡಿಎಸ್ ಎರಡನೇ ಪಟ್ಟಿ ರಿಲೀಸ್ – ಹಾಸನಕ್ಕೆ ಸ್ವರೂಪ್ – ಮಂಡ್ಯ ಅಭ್ಯರ್ಥಿ ಇನ್ನೂ ಗೌಪ್ಯ

Copyright © All rights reserved Newsnap | Newsever by AF themes.
error: Content is protected !!