ಡಿಎಂಕೆ 27 ನಾಯಕರ ಬಳಿ 2 ಲಕ್ಷ ಕೋಟಿಗೂ ಅಧಿಕ ಆಸ್ತಿ : ಅಣ್ಣಾಮಲೈ ಆರೋಪ

Team Newsnap
1 Min Read
27 DMK leaders have more than 2 lakh crore assets: Annamalai alleges ಡಿಎಂಕೆ 27 ನಾಯಕರ ಬಳಿ 2 ಲಕ್ಷ ಕೋಟಿಗೂ ಅಧಿಕ ಆಸ್ತಿ : ಅಣ್ಣಾಮಲೈ ಆರೋಪ

ತಮಿಳುನಾಡಿನ ಡಿಎಂಕೆಯ 27 ಮಂದಿ ನಾಯಕರ ಬಳಿ 2 ಲಕ್ಷ ಕೋಟಿ ರುಗಳಿಗೂ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಡಿಎಂಕೆ ಫೈಲ್ಸ್ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅಣ್ಣಾಮಲೈ, ದಿವಂಗತ ಕರುಣಾನಿಧಿ, ಸ್ಟಾಲಿನ್, ಅವರ ಸಹೋದರಿ ಕನಿಮೋಳಿ, ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್, ಅವರ ಪುತ್ರ ಹಾಗೂ ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್, ಶಬರೇಶನ್ (ಸ್ಟಾಲಿನ್ ಅವರ ಅಳಿಯ), ಸೆಂತಾಮರೈ (ಸ್ಟಾಲಿನ್ ಸಹೋದರಿ) ಮುರಸೋಲಿ ಮಾರನ್, ದಯಾನಿಧಿ ಮಾರನ್ (ಸ್ಟಾಲಿನ್ ಅವರ ಸೋದರ ಸಂಬಂಧಿಗಳು) ಅಳಗಿರಿ (ಕರುಣಾನಿಧಿ ಅವರ ಮಗ) ಅವರ ಅಕ್ರಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದರು.

ಈ ಆರೋಪಗಳು ಮತ್ತು ಸಂಪತ್ತು ಕ್ರೋಢೀಕರಣದ ಕುರಿತು ಸಿಬಿಐಗೆ ವಿವರವಾದ ಅರ್ಜಿಯನ್ನು ಸಲ್ಲಿಸುವುದಾಗಿ ಅವರು ಹೇಳಿದರು.

ಒಂದನೇ ಆವೃತ್ತಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಮುಂದಿನ ಭಾಗಗಳನ್ನು ಸರಣಿಯಲ್ಲಿ ತರಲಾಗುವುದು, ಈ ಬಿಟ್ಟಿರುವ ವಿಡಿಯೋದಲ್ಲಿ ಆಸ್ತಿ ವಿವರಗಳನ್ನು ಮಾತ್ರ ನೀಡಲಾಗಿದೆ.

ಮುಂದಿನ ವಿಡಿಯೋದಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.ಇದನ್ನು ಓದಿ –ಜೆಡಿಎಸ್ ಎರಡನೇ ಪಟ್ಟಿ ರಿಲೀಸ್ – ಹಾಸನಕ್ಕೆ ಸ್ವರೂಪ್ – ಮಂಡ್ಯ ಅಭ್ಯರ್ಥಿ ಇನ್ನೂ ಗೌಪ್ಯ

Share This Article
Leave a comment