ತೆಲುಗಿನ ಗೀತಗೋವಿಂದಂ ಚಿತ್ರದ ದೃಶ್ಯ ದಿಂದ ಪ್ರಚೋದನೆ ಗೊಂಡ ಯುವಕನೊಬ್ಬ ಯುವತಿಗೆ ಚುಂಬಿಸಿದ ಘಟನೆ ಬಗ್ಗೆ ದೂರು ದಾಖಲಾಗಿದೆ.
ಈ ಘಟನೆ ನಡೆದಿದ್ದ ಬಳ್ಳಾರಿ – ಬೆಂಗಳೂರು ಹೈ ಟೆಕ್ ಬಸ್ ನಲ್ಲಿ. ಯುವತಿ ನೀಡಿದ ದೂರನ್ನು ಸ್ವೀಕರಿಸಿದ ಪೀಣ್ಯ ಪೊಲೀಸರು ಎಫ್ ಐಆರ್ ಹಾಕಿದ್ದಾರೆ.
ಕಳೆದ ರಾತ್ರಿ ಬಳ್ಳಾರಿ ಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ತೆಲುಗಿನ ಗೀತಗೋವಿಂದಂ ಚಿತ್ರದ ಹಾಡಿನ ದೃಶ್ಯ ಪ್ರಸಾರವಾಗುತ್ತಿತ್ತು.
ಈ ಚಿತ್ರದ ಹಾಡಿನಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ನಾಯಕಿ ರಷ್ಮಿಕಾಗೆ ನಾಯಕ ವಿಜಯ್ ದೇವರಕೊಂಡ ಚುಂಬಿಸುವ ದೃಶ್ಯವಿದೆ. ಈ ದೃಶ್ಯ ನೋಡಿದ ಯುವಕ ಪಕ್ಕದಲ್ಲೇ ಕುಳಿತು ನಿದ್ದೆ ಮಾಡುತ್ತಿದ್ದ ಯುವತಿಗೆ ಚುಂಬಿಸಿ ಕಾಮುಕ ಕೀಟಲೆ ಮಾಡಿ ಕೃತ್ಯ ಎಸಗಿದ್ದಾನೆ.
ನಂತರ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯಾಗಿರುವ ಯುವತಿ ಬಸ್ ನಿಂದ ಇಳಿದು , ತನ್ನ ಮೇಲಾದ ದೌರ್ಜನ್ಯ ದ ಪೋಲಿಸರಿಗೆ ದೂರು ನೀಡಿದ್ದಾಳೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ