February 21, 2026

Newsnap Kannada

The World at your finger tips!

highcourt,congress,lokayukta

shock for Congress: High Court order to cancel ACB - Lokyukta gets power again

ವಿವಾಹಿತ ಪುತ್ರಿಗೂ ಅನುಕಂಪದ ಉದ್ಯೋಗ – ಹೈಕೋರ್ಟ್ ತೀರ್ಪು

Spread the love

ವಿವಾಹಿತ ಮಗಳಿಗೂ ಅನುಕಂಪದ ಆಧಾರದ ಉದ್ಯೋಗದ ಅವಕಾಶ ನೀಡುವಂತೆ ಹೈಕೋರ್ಟ್ ತೀರ್ಪು ನೀಡಿದೆ.

ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠ ಇದುವರೆಗೂ ಪತ್ನಿ ಹಾಗೂ ಪುತ್ರ ಅವಿವಾಹಿತ ಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ವಿವಾಹಿತ ಮಗಳಿಗೂ ಅನುಕಂಪದ ಆಧಾರದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಇದು ತಾರತಮ್ಯದ ಕಾನೂನು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಭುವನೇಶ್ವರಿ ಪುರಾಣಿಕೆ ರಿಟ್ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಹೈಕೋರ್ಟ್ ವಿವಾಹಿತ ಪುತ್ರಿಗೂ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಸಂಬಂಧ ಮಹತ್ವದ ತೀರ್ಪು ನೀಡಿದೆ.

ಅವಲಂಬಿತ ಕುಟುಂಬ ಸದಸ್ಯ ಮರಣ ಹೊಂದಿದಾಗ ಒಬ್ಬ ಪತ್ನಿ, ಪುತ್ರ, ಅವಿವಾಹಿತ ಮಗಳು, ಮತ್ತು ಅವಿವಾಹಿತ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿತ್ತು. ಇದು ತಾರತಮ್ಯದ ಕಾನೂನು ಎಂದು ಹೈಕೋರ್ಟ್ ಹೇಳಿದೆ.

error: Content is protected !!