ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ

Team Newsnap
1 Min Read

ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವ ಘಟನೆ ಶಿವಮೊಗ್ಗದ ರಾಗಿಗುಡ್ಡ ಶಾಂತಿನಗರದಲ್ಲಿ ನಡೆದಿದೆ.

ಕಳೆದ 28ನೇ ದಿನದಂದು ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಇದ್ದಿದ್ದರಿಂದ, ಈದ್ ಮಿಲಾದ್ ಮೆರವಣಿಗೆಯನ್ನು ನಿನ್ನೆಗೆ (ಭಾನುವಾರ) ಮುಸ್ಲಿಂ ಮುಖಂಡರು ಹಮ್ಮಿಕೊಂಡಿದ್ದರು.

ಈದ್ ಮಿಲಾದ್ ಮೆರವಣಿಗೆಗೆ ಇಡೀ ಶಿವಮೊಗ್ಗ ನಗರವನ್ನು ಹಸಿರುಮಯ ಮಾಡಲಾಗಿತ್ತು. ಹಸಿರು ಬಾವುಟ, ಟಿಪ್ಪು ಸುಲ್ತಾನ್, ಔರಂಗಜೇಬ್ ಕಟೌಟ್ ಹಾಕಿದ್ದರು.

ನಿನ್ನೆ ಮಧ್ಯಾಹ್ನ 3 ಗಂಟೆಗೆ ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ನಗರದ ಎಲ್ಲಾ ಬಡಾವಣೆಗಳಿಂದ ಮುಸ್ಲಿಂ ಬಾಂಧವರು ಆಗಮಿಸಿದರು.

ರಾಗಿಗುಡ್ಡದಿಂದಲೂ ಮೆರವಣಿಗೆಯಲ್ಲಿ ಭಾಗಿಯಾಗಲು ಕೆಲ ಮುಸ್ಲಿಂ ಬಾಂಧವರು ತೆರಳುತ್ತಿದ್ದರು. ಈ ವೇಳೆ ರಾಗಿಗುಡ್ಡದ ಶನೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಸಾಗುವಾಗ ಕಲ್ಲು ತೂರಾಟ ನಡೆದಿದೆ.

2 ಗುಂಪಿನ ನಡುವೆ ಕಲ್ಲು ತೂರಾಟ ನಡೆದು, 6 ಮಂದಿ ಗಾಯಗೊಂಡಿದ್ದಾರೆ. 7 ಮನೆ, 1 ಕಾರು, 1 ಬೈಕ್ ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. 35 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತಿಯಾಗಿ ಮೆರವಣಿಗೆಯಲ್ಲಿ ಇದ್ದವರು ಕಲ್ಲು ತೂರಾಟ ನಡೆಸಿದರು. ಪರಿಣಾಮ ಹಿಂದೂಗಳಿಗೆ ಸೇರಿದ 7 ಮನೆಗಳು ಹಾಗೂ 1 ಬೈಕ್, 1 ಕಾರು ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ. 

ಪೊಲೀಸರು ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಸದ್ಯ ಕಲ್ಲು ತೂರಾಟ ನಡೆಸಿದವರ ಪತ್ತೆ ಹಚ್ಚಿ ಮನೆ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಪತ್ತೆಗೆ ಎಸ್‌ಪಿ 3 ವಿಶೇಷ ತಂಡ ರಚನೆ ಮಾಡಿದ್ದು, ಇದುವರೆಗೆ 11ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಗಿಗುಡ್ಡ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸದ್ಯ ಗಲಭೆ ನಡೆದ ಸ್ಥಳದಲ್ಲಿ ಆರ್‌ಎಎಫ್, ಡಿಎಆರ್, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Share This Article
Leave a comment