ತುಮಕೂರು ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ, ಶತಾಯುಷಿ ಶಿವಕುಮಾರ ಶ್ರೀಗಳು ಶಿವೈಕ್ಯರಾಗಿ ಇಂದಿಗೆ ಮೂರು ವರ್ಷ.
ಕೋವಿಡ್ ಉಲ್ಬಣದಿಂದಾಗಿ ಅತ್ಯಂತ ಸರಳವಾಗಿ ಲಿಂಗೈಕ್ಯ ಶ್ರೀಗಳ ಸ್ಮರಣೆ ಮಾಡಲು ಶ್ರೀಮಠದಲ್ಲಿ ಸಿದ್ಧತೆ ನಡೆದಿದೆ.
ಸಿದ್ದಲಿಂಗ ಸ್ವಾಮಿಗಳಿಂದ ಹಳೇ ಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಆ ಬಳಿಕ ಬೆಳಗ್ಗೆ ಪ್ರಾತಃಕಾಲದಲ್ಲಿ ಶ್ರೀಗಳ ಗದ್ದಿಗೆಗೆ ಅಭಿಷೇಕ, ಪೂಜೆ, ಮಹಾಮಂಗಳಾರತಿ ನಡೆಯಿತು.
ಈ ಪೂಜೆ ಹೊರತುಪಡಿಸಿದರೆ ಯಾವುದೇ ವೇದಿಕೆ ಕಾರ್ಯಕ್ರಮ, ಉತ್ಸವ, ಮೆರವಣಿಗೆ ಇರೋದಿಲ್ಲ. ಇತ್ತ ಈ ದಿನವನ್ನು ಸರ್ಕಾರ ದಾಸೋಹ ದಿನ ಎಂದು ಆಚರಣೆ ಮಾಡುವಂತೆ ಘೋಷಣೆ ಮಾಡಿದೆ.
ಸಿಎಂ ಬೊಮ್ಮಾಯಿ ಇಂದು 9.30 ಕ್ಕೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದಿಗೆ ದರ್ಶನ ಪಡೆದು ದೀಪ ಬೆಳಗಿಸಿ ಸಾಂಕೇತಿಕ ದಾಸೋಹ ದಿನವನ್ನು ಉದ್ಘಾಟನೆ ಮಾಡಲಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು