December 26, 2024

Newsnap Kannada

The World at your finger tips!

WhatsApp Image 2021 10 18 at 2.20.53 PM

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಶಂಕರ್​ರಾವ್​ ಇನ್ನಿಲ್ಲ

Spread the love

ಕನ್ನಡ ಚಿತ್ರರಂಗ ಹಿರಿಯ ಹಾಸ್ಯ ನಟ ಶಂಕರ್‌ರಾವ್ ಸೋಮವಾರ ವಿಧಿವಶರಾಗಿದ್ದಾರೆ.

ದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಶಂಕರ್ ರಾವ್ ಅವರಿಗೆ84 ವರ್ಷ ವಯಸ್ಸಾಗಿತ್ತು.

ಪಾಪಾ ‌‌ಪಾಂಡು ಧಾರಾವಾಹಿ ಖ್ಯಾತಿಯ ಪಾತ್ರದಿಂದ ಜನಪ್ರಿಯತೆ ಗಳಿಸಿದ್ದ ನಟ ಶಂಕರ್‌ರಾವ್ ಹಿರಿತೆರೆ, ಮತ್ತು ಕಿರುತೆರೆ ಸೇರಿದಂತೆ ಸಾಕಷ್ಟು ಸಿನಿಮಾ ಧಾರವಾಹಿಗಳಲ್ಲಿ ಅಭಿನಯಿಸಿದ್ದರು.

ನಟರಂಗ ತಂಡದೊಂದಿಗೆ ಗುರುತಿಸಿಕೊಂಡಿದ್ದ ಶಂಕರ್ ರಾವ್ ಮೂಲತಃ ತುಮಕೂರಿನವರು.

ಹವ್ಯಾಸಿ ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.

ತೆಲುಗು ಚಿತ್ರಗಳನ್ನು ನೋಡುತ್ತಾ ಬೆಳೆದ ಶಂಕರ್‌ರಾವ್, ಅದರಿಂದ ರಂಗಭೂಮಿಯತ್ತ ಒಲವು ಹೆಚ್ಚಿಸಿಕೊಂಡಿದ್ದರು ಪಾಪ ಪಾಂಡು ಧಾರಾವಾಹಿಯಲ್ಲಿ ಅಮೋಘ ಅಭಿನಯ ನೀಡಿದ್ದ ಶಂಕರ್‌ರಾವ್ 1965 ರಲ್ಲಿ ಬೆಂಗಳೂರಿಗೆ ಬಂದು ‘ಗೆಳೆಯರ ಬಳಗ’ ಎಂಬ ತಂಡ ಕಟ್ಟಿಕೊಂಡು ತಮ್ಮ ಅಭಿನಯದಿಂದ ಬರುವ ಹಣವನ್ನು ನಾಟಕದ ತಂಡಕ್ಕಾಗಿ ಮೀಸಲಿಡುತ್ತಿದ್ದರು.  ಶಿವರಾಜ್‌ಕುಮಾರ್, ರವಿಚಂದ್ರನ್, ರಮೇಶ್​ ಅರವಿಂದ್​ ಸೇರಿದಂತೆ ಹಲವು ಸ್ಟಾರ್​ ನಟರ ಚಿತ್ರದಲ್ಲಿ ನಟಿಸಿದ್ದ ಅವರ ನಿಧನಕ್ಕೆ ಚಿತ್ರರಂಗದ ಖ್ಯಾತರು ಸಂತಾಪ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!