ಲಿಂಗಾಯಿತರೇ ಸಿಎಂ ಆಗಬೇಕು: ಯಡಿಯೂರಪ್ಪ ನಿಗೆ ಪರ್ಯಾಯ ನಾಯಕನ ಹುಡುಕಾಟ !

Team Newsnap
1 Min Read
Prime Minister Modi to inaugurate Shimoga Airport: BSYಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ಮೋದಿ : ಬಿಎಸ್‍ವೈ

‘ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಮತ್ತೆ ಲಿಂಗಾಯತ ಸಮುದಾಯವದವರೇ ಮುಖ್ಯಮಂತ್ರಿ ಆಗಬೇಕು’ ಎಂದು ವೀರಶೈವ-ಲಿಂಗಾಯತ ಭಾನುವಾರ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಒತ್ತಾಯಿಸಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೆರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ‘ಪ್ರಸ್ತುತ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಿದರೆ ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಭಾವಿ ನಾಯಕರೇ ರಾಜ್ಯದ ಮುಖ್ಯಮಂತ್ರಿಯಾಗಬೇಕು’ ಎಂದು ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಹೈಕೋರ್ಟ್‌ನ ಹಿರಿಯ ವಕೀಲರಾದ ಗಂಗಾಧರ ಅವರು ‘ಮುಖ್ಯಮಂತ್ರಿಗಳ ಮಗ ಬಿ. ವೈ. ವಿಜಯೇಂದ್ರ ವಿಪರೀತ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆದರೆ ಯಡಿಯೂರಪ್ಪ ಮಗನಿಗೋಸ್ಕರ ಸಮಜವನ್ನು ಬಲಿಕೊಡುತ್ತಿದ್ದಾರೆ’ ಎಂದು ದೂರಿದರು.

‘ಜೆಡಿಎಸ್ ಮಾಡಿದ್ದ ತಪ್ಪಿನ ಫಲ ಹಾಗೂ ಅನುಕಂಪದ ಕಾರಣದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದರು. ಆದರೆ ಈಗ ಅವರ ನಾಯಕತ್ವ ಅಲ್ಲಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದರೆ, ಅವರು ಬಸನಗೌಡ ಪಾಟೀಲ್ ಯತ್ನಾಳ್, ಜಗದೀಶ್ ಶೆಟ್ಟರ್ ಅಥವಾ ಬಸರಾಜ ಬೊಮ್ಮಾಯಿ ಇವರಲ್ಲಿ ಒಬ್ಬರಾಗಿರಬೇಕು’ ಎಂದು ಸಮಿತಿ ನಿರ್ಧರಿಸಿತು ಎನ್ನಲಾಗಿದೆ.

Share This Article
Leave a comment