ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಭಾರತಿ ಪತ್ರಿಕೆಯ ಪತ್ರಕರ್ತ ದಯಾನಂದ ಕುಡುಪು ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ.
ಪತ್ರಕರ್ತ ದಯಾನಂದ ಕುಡುಪು ಮೃತಪಟ್ಟಿದ್ದು, ಅವರ ಕುಟುಂಬ ಸಂಕಷ್ಟದಲ್ಲಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ರಾಜ್ಯ ಸಂಘದ ಗಮನಕ್ಕೆ ತಂದಿತ್ತು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮನವಿ ಮೇರೆಗೆ, ಅಂದಿನ ಸಿಎಂ ಯಡಿಯೂರಪ್ಪ ಅವರು ಪರಿಹಾರ ಮಂಜೂರು ಮಾಡಿದ್ದರು.
ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ್ದ ಯಡಿಯೂರಪ್ಪ, ಈಗ ಪರಿಹಾರ ಬಿಡುಗಡೆ ಮಾಡಿದ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಕೃತಜ್ಞತೆಗಳು ಸಲ್ಲಿಸಿದೆ.
- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ- ಇಬ್ಬರು ಯುವಕರ ಸಾವು
- ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ
- ಜೂ. 3 ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ: ಶಿಕ್ಷಣ ಸಚಿವ ಬಿ ಸಿ ನಾಗೇಶ್
- ಅವಕಾಶ ಸಿಕ್ಕಾಗ ಖಂಡಿತಾ ಮಂಡ್ಯಕ್ಕೆ ಹೋಗುವೆ – ಸನ್ನಿಲಿಯೋನ್
- ರೋಹಿಣಿಗೆ ಮತ್ತೆ ಸಂಕಷ್ಟ – ಮೈಸೂರು ಡಿಸಿ ಆಗಿದ್ದ ವೇಳೆ ಮಾಡಿದ್ದ ಅಕ್ರಮ ಆರೋಪ ತನಿಖೆಗೆ ಆದೇಶ
More Stories
ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ- ಇಬ್ಬರು ಯುವಕರ ಸಾವು
ಜೂ. 3 ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ರೋಹಿಣಿಗೆ ಮತ್ತೆ ಸಂಕಷ್ಟ – ಮೈಸೂರು ಡಿಸಿ ಆಗಿದ್ದ ವೇಳೆ ಮಾಡಿದ್ದ ಅಕ್ರಮ ಆರೋಪ ತನಿಖೆಗೆ ಆದೇಶ