ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಗೆ ಯತ್ನ

Team Newsnap
2 Min Read

ಸಿಎಂ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂ. ಆರ್. ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ರಾತ್ರಿ ಈ ಘಟನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ನಡೆದಿದೆ. ಊಟ ಮಾಡುವ ಮುನ್ನ ಪುಸ್ತಕ ಓದುತ್ತಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಂತೋಷ್ ಏಕಾಏಕಿ ಎರಡನೆಯ ಮಹಡಿಯಲ್ಲಿರುವ ರೂಂನಲ್ಲಿ 12 ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥ ಗೊಂಡಿದ್ದರು.

ಬಳಿಕ ಅವರನ್ನು ತಕ್ಷಣ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂ ಆರ್ ಸಂತೋಷ್, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ

ಎಂಎಸ್ ರಾಮಯ್ಯ ಆಸ್ಪತ್ರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಭೇಟಿ ನೀಡಿ ಆಸ್ಪತ್ರೆಯ ವೈದ್ಯರಿಂದ ಆರೋಗ್ಯವನ್ನು ವಿಚಾರಿಸಿದರು.

ಶುಕ್ರವಾರ ಬೆಳಿಗ್ಗೆ ಮುಕ್ಕಾಲು ಗಂಟೆ ವಾಕ್ ಮಾಡಿ ಖುಷಿಯಾಗಿದ್ದನು. ಯಾವ ಕಾರಣಕ್ಕಾಗಿ ಈ ರೀತಿ ನಿರ್ಧಾರ ಮಾಡಿದ್ದ ಎಂಬುದು ನಂಗೆ ಗೊತ್ತಿಲ್ಲ. ನಾಳೆ ಎಲ್ಲವೂ ಗೊತ್ತಾಗುತ್ತದೆ ಎಂದು ಸಿ ಎಂ ಯಡಿಯೂರಪ್ಪ ಹೇಳಿದರು.

ನಾವು ಕೌಟುಂಬಿಕ ವಾಗಿ ತುಂಬಾ ಆತ್ಮೀಯತೆಯಿಂದ ಇದ್ದೇವೆ. ರಾಜಕೀಯ ಕಾರಣಕ್ಕಾಗಿ ಅವರಿಗೆ ಮನಸ್ಸು ಹತೋಟಿ ತಪ್ಪಿತ್ತು ಎಂಬುದನ್ನು ನಾನು ಸೂಕ್ಷ್ಮ ವಾಗಿ ಗಮನಿಸಿದ್ದೆ ಎಂದು ಪತ್ನಿ ಜಾಹ್ನವಿ ಹೇಳಿದ್ದಾರೆ.

ರಾಜಕೀಯ ಪಾದಾರ್ಪಣೆಯ ಕನಸು ಕಂಡಿದ್ದ ಸಂತೋಷ್

ಇತ್ತೀಚಿನ ದಿನಗಳಲ್ಲಿ ಅರಸೀಕೆರೆ ವಿಧಾನ ಸಭಾ ಕ್ಷೇತ್ರವನ್ನು ಹೇಗಾದರೂ ಮಾಡಿ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿ ಶಾಸಕನಾಗಬೇಕು ಎಂಬ ಆಸೆಯನ್ನು ಹೊತ್ತಿದ್ದ ಸಂತೋಷ್ ಮೂರ್ನಾಲ್ಕು ತಿಂಗಳಿನಿಂದ ಅರಸೀಕೆರೆ ಕ್ಷೇತ್ರದ ಸಾಮಾಜಿಕ ಚಟುವಟಿಕೆಗಳಲ್ಲಿ ಮತ್ತು ರಾಜಕೀಯವಾಗಿ ಮುಂಚೂಣಿ ಯಲ್ಲಿದ್ದರು.

ಮೇ 28ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿದ್ದರು. ಇಷ್ಟೇ ಅಲ್ಲದೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರನ್ನ ಪ್ರತಿ ಕಾರ್ಯಕ್ರಮಗಳಲ್ಲಿಯೂ ವಿರೋಧಿಸುತ್ತ ಬಂದಿದ್ದ ಸಂತೋಷ, ಕೆ ಎನ್ ಶಿವಲಿಂಗೇಗೌಡರ ಲೋಪದೋಷಗಳನ್ನು ಎತ್ತಿ ಹಿಡಿಯುವ ಮೂಲಕ ಮಾತಿನ ಮೂಲಕವೇ ಹರಿಹಾಯ್ದಿದ್ದರು.

ಸಂತೋಷ್ ಎಂಟ್ರಿ ಗೆ ವಿರೋಧ

ಅರಸೀಕೆರೆ ಕ್ಷೇತ್ರಕ್ಕೆ ಬಂದ ಬಳಿಕ ಸ್ವಪಕ್ಷೀಯರ ಜೊತೆ ಹೊಂದಾಣಿಕೆ ಇಲ್ಲದೆ ಬಿಜೆಪಿ ಪಕ್ಷದಲ್ಲಿ ಎರಡು ಬಣಗಳಾಗಿತ್ತು. ಸಂತೋಷ್ ವಿರೋಧಿ ಬಣ ವಾಗಿರುವ ಮತ್ತೊಂದು ಬಿಜೆಪಿ ತಂಡ ಸಂತೋಷ್ ಸಾಂಸಾರಿಕ ಜೀವನದ ವಿಚಾರವನ್ನ ಎಳೆದು ಅವರಿಗೆ ಹಿಂದೆಯೇ ಅಪಮಾನ ಮಾಡಿದರು.
ಈ ನಡುವೆ ಸಂತೋಷ್ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸಿಎಂ ಸೂಚಿಸಿದ್ದರು ಎಂದ ಹೇಳಲಾದ ನಂತರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಜೊತೆಯು ಕೂಡ ಒಡನಾಟದಲ್ಲಿ ಭಾರಿ ಕಂದಕ ಉಂಟಾಗಿತ್ತು. ಬಿರುಕು ಬಿಟ್ಟಿತ್ತು ಎನ್ನಲಾಗಿತ್ತು.

Share This Article
Leave a comment