December 19, 2024

Newsnap Kannada

The World at your finger tips!

CM,sadguru,yoga

CM met sadguru jaggi

ದಾವೋಸ್ ನಲ್ಲಿ ಸದ್ಗುರು ಜಗ್ಗಿ ಭೇಟಿಯಾದ ಸಿಎಂ : ಮಂಡಿನೋವಿನ ಬಗ್ಗೆ ಮಾಹಿತಿ

Spread the love

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಸಮಾವೇಶಕ್ಕೂ ಮುನ್ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿದರು.


ಈ ವೇಳೆ ಸಿಎಂ ನಡೆದು ಬರುತ್ತಿದ್ದುದನ್ನು ನೋಡಿದ ಸದ್ಗುರು ಏನಾಗಿದೆ ಎಂದು ವಿಚಾರಿಸಿದರು. ಆಗ ಬೊಮ್ಮಾಯಿ ತಮ್ಮ ಮಂಡಿ ನೋವಿನ ಸಮಸ್ಯೆ ಬಗ್ಗೆ ಜಗ್ಗಿ ವಾಸುದೇವ್ ಬಳಿ ಹೇಳಿಕೊಂಡರು.

ಇದನ್ನು ಓದಿ –ಯುವತಿ ಹಣೆಗೆ ರಿವಾಲ್ವರ್​ ಇಟ್ಟು ಅತ್ಯಾಚಾರ ಮಾಡಿದ ಬೆಂಗಳೂರು ಉದ್ಯಮಿ ಬಂಧನಯುವತಿ ಹಣೆಗೆ ರಿವಾಲ್ವ

ಶೃಂಗಸಭೆಯಲ್ಲಿ ಸಿಎಂ ಬೊಮ್ಮಾಯಿ ನೀಲಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೈಗಾರಿಕಾ ಇಲಾಖೆ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಹಾಗೂ ಸಿಎಂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸಿಎಂಗೆ ಸಾತ್ ನೀಡಿದ್ದಾರೆ.

ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾರತವನ್ನು ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದಾರೆ. ಸಿಎಂ ಜೊತೆ 8 ಜನರ ತಂಡ ದಾವೋಸ್‌ಗೆ ತೆರಳಿದ್ದು, ಸಿಎಂ ಆದ ಬಳಿಕ ಬೊಮ್ಮಾಯಿಯವರಿಗೆ ಇದು ಮೊದಲ ವಿದೇಶ ಪ್ರವಾಸವಾಗಿದೆ.

Copyright © All rights reserved Newsnap | Newsever by AF themes.
error: Content is protected !!